Recent Posts

Monday, January 27, 2025
ಸುದ್ದಿ

2 ಸಾವಿರ ನೋಟು ತೆಗೆಯಲು ಮೆಟ್ರೋ ಹಳಿಗೆ ಇಳಿದ ಮಹಿಳೆ: ಮಹಿಳೆ ಮೇಲೆ ಹರಿದ ಮೆಟ್ರೋ – ಕಹಳೆ ನ್ಯೂಸ್

ದೆಹಲಿ ರೈಲ್ವೆ ನಿಲ್ದಾಣದಲ್ಲಿ ಇಂದು ಆಘಾತಕಾರಿ ಘಟನೆ ನಡೆದಿದೆ. 2 ಸಾವಿರ ರೂಪಾಯಿ ನೋಟು ತೆಗೆಯಲು ಮಹಿಳೆ ಮೆಟ್ರೋ ಹಳಿಗೆ ಇಳಿದಿದ್ದಾಳೆ. ಮಹಿಳೆ ಮೇಲೆ ಮೆಟ್ರೋ ಹರಿದಿದೆ. ಅದೃಷ್ಟವಶಾತ್ ಮಹಿಳೆ ಪ್ರಾಣ ಉಳಿದಿದೆ. ಸದ್ಯ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಬೆಳಿಗ್ಗೆ 10.30 ರ ಸುಮಾರಿಗೆ ನಡೆದಿದೆ. ದೆಹಲಿಯ ದ್ವಾರಕಾ ಮೋಡ್ ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದೆ. ಮಹಿಳೆ ಎರಡು ಸಾವಿರ ರೂಪಾಯಿ ನೋಟು ತೆಗೆಯಲು ಕೆಳಗೆ ಇಳಿದಿದ್ದಾಳಂತೆ. ಈ ವೇಳೆ ಮೆಟ್ರೋ ರೈಲು ಬಂದಿದೆ. ತಕ್ಷಣ ಮಹಿಳೆ ಎರಡು ಕಂಬಿಗಳ ಮಧ್ಯೆ ಮಲಗಿದ್ದಾಳೆ ಎನ್ನಲಾಗಿದೆ. ನಂತ್ರ ಮಹಿಳೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆ ಹಿನ್ನೆಲೆಯಲ್ಲಿ ನಿಲ್ದಾಣದಲ್ಲಿ ಗೊಂದಲದ ವಾತಾವರಣ ಮನೆ ಮಾಡಿತ್ತು. ಬ್ಲೂ ಲೈನ್ ಸೇವೆಯನ್ನು ಕೆಲಕಾಲ ರದ್ದು ಮಾಡಲಾಗಿತ್ತು. ಬ್ಲೂ ಲೈನ್ ನೋಯ್ಡಾ ಎಲೆಕ್ಟ್ರಾನಿಕ್ ಸಿಟಿಯನ್ನು ದ್ವಾರಕಾ ಸೆಕ್ಟರ್ 21 ಕ್ಕೆ ಸಂಪರ್ಕಿಸುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು