Monday, January 27, 2025
ಸುದ್ದಿ

ಚುನಾವಣಾ ಹಿನ್ನೆಲೆ: ಸುಳ್ಯದಲ್ಲಿ ಪೋಲೀಸ್ ಇಲಾಖೆ ವತಿಯಿಂದ ಜಾಗೃತಿ ಸಭೆ- ಕಹಳೆ ನ್ಯೂಸ್

ಸುಳ್ಯ: ಏಪ್ರಿಲ್ ತಿಂಗಳಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ನಾಗರೀಕರಿಗೆ ಜಾಗೃತಿ ಮೂಡಿಸು ಸಲುವಾಗಿ ಪೋಲೀಸ್ ಇಲಾಖೆ ವತಿಯಿಂದ ಜಾಗೃತಿ ಸಭೆಯನ್ನು ಮಾ.13 ರಂದು ಸುಳ್ಯದ ಸಿ.ಎ.ಬ್ಯಾಂಕಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಸರ್ಕಲ್ ಇನ್ಸ್ ಪೆಕ್ಟರ್ ಸತೀಶ್ ಮತ್ತು ಸಬ್ ಇನ್ಸ್ಪೆಕ್ಟರ್ ಹರೀಶ್ ಎಂ.ಆರ್. ರವರು ಕಾನೂನಿನ ಬಗ್ಗೆ ಮಾಹಿತಿ ನೀಡಿದರು. ಚುನಾವಣಾ ಆಯೋಗದ ಆದೇಶದ ಪ್ರಕಾರ ಕಾನೂನಿನ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು. ಗಡಿ ಪ್ರದೇಶಗಳ 5 ಕಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯಾವುದೇ ರೀತಿಯ ಬ್ಯಾನರ್ ಗಳನ್ನು ಸಾರ್ವಜನಿಕ ಪ್ರದೇಶದಲ್ಲಿ ಅಳವಡಿಸಬಾರದು. ಅನುಮತಿ ಇಲ್ಲದೆ ಯಾವುದೇ ರೀತಿಯ ಸಭೆ ಸಮಾರಂಭಗಳನ್ನು ಹಮ್ಮಿಕೊಳ್ಳುವಂತಿಲ್ಲ. ಜಾತ್ರೋತ್ಸವ, ಉರೂಸ್, ನೇಮೋತ್ಸವ ನಡೆಸುವ ಸಂದರ್ಭದಲ್ಲಿ ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕ ಬಳಸುವಂತಿಲ್ಲ.

ತಮ್ಮಲ್ಲಿರುವ ಕೋವಿಗಳನ್ನು ನಿಗದಿಪಡಿಸಿದ ತಾರೀಕಿನ ಒಳಗಡೆ ಡಿಫಾಸಿಟ್ ಮಾಡಬೇಕು. ದಾಖಲು ಪತ್ರ ಇಲ್ಲದೇ ನಗದು ರೂ.50000 ಕ್ಕಿಂತ ಹೆಚ್ಚು ತೆಗೆದುಕೊಂಡು ಹೋಗುವಂತಿಲ್ಲ. ಅನಧಿಕೃತ ದಾಖಲೆಗಳಿಲ್ಲದೆ ನಗದು ಸಿಕ್ಕಿದಲ್ಲಿ ಕಾನೂನಿನ ಪ್ರಕಾರ ವಶದಲ್ಲಿರಿಸಬೇಕಾಗುವುದು. ರಾಜಕೀಯವಾಗಿ ಯಾವುದೇ ಪಕ್ಷದ ಅಭ್ಯರ್ಥಿಯ ಪರ ಜಾಲತಾಣದಲ್ಲಿ ಮೆಸೇಜ್ ಕಳುಹಿಸಿದರೆ ಅದಕ್ಕೆ ತಗಲುವ ವೆಚ್ಚ ಅಭ್ಯರ್ಥಿಯ ಖಾತೆಗೆ ಜಮೆಯಾಗುವುದು.

ಸಾರ್ವಜನಿಕವಾಗಿ ನಡೆಯುವ ಉತ್ಸವ ಇನ್ನಿತರ ಕಾರ್ಯಕ್ರಮಗಳಲ್ಲಿ ಯಾವುದೇ ಅಭ್ಯರ್ಥಿಯ ಪರ ಪ್ರಚಾರ ಮಾಡಬಾರದು. ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರುಗಳಾದ ಎನ್.ಎ.ರಾಮಚಂದ್ರ, ಗೋಕುಲ್ ದಾಸ್, ಮುಸ್ತಾಫ, ಪಿ.ಎಸ್.ಗಂಗಾಧರ, ಬಾಲಗೋಪಾಲ ಸೇರ್ಕಜೆ, ದಾಮೋದರ ಮಂಚಿ, ತಿಮ್ಮಪ್ಪ ನಾವೂರು, ರಂಜಿತ್ ಪೂಜಾರಿ, ಕರುಣಾಕರ ಸೇರ್ಕಜೆ, ಅಬ್ದುಲ್ ರಜಾಕ್(ರಜ್ಜು), ದಿನೇಶ್ ಕೊಟ್ಯಾನ್, ಕೇಶವ ಬಂಗ್ಲೆಗುಡ್ಡೆ, ಸರಸ್ವತಿ ಬೊಳಿಯಮಜಲು, ಮುನೀರ್ ಅನ್ಸಾರ್, ಹರ್ಷ ಕರುಣಾಕರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.