Sunday, January 19, 2025
ಸುದ್ದಿ

ಮುಸ್ಲಿಮರು ಬಾಬರಿ ಮಸೀದಿ ಜಾಗ ಯಾವುದೇ ಕಾರಣಕ್ಕೂ ಬಿಟ್ಟು ಕೊಡಲ್ಲ | ಬಾಬರಿ ಮಸೀದಿ ಕ್ರಿಯಾ ಸಮಿತಿ ಹೇಳಿಕೆ.

ಹೊಸದಿಲ್ಲಿ : ಬಾಬರಿ ಮಸೀದಿಗೆ ಸಂಬಂಧಿಸಿದ ಜಾಗದ ಮೇಲಿನ ಹಕ್ಕನ್ನು ಮುಸ್ಲಿಮರು ಎಷ್ಟು ಮಾತ್ರಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಅಖೀಲ ಭಾರತ ಮುಸ್ಲಿಮ್‌ ವೈಯಕ್ತಿಕ ಕಾನೂನು (ಎಐಎಂಪಿಎಲ್‌ಬಿ) ಮತ್ತು ಅಖೀಲ ಭಾರತ ಬಾಬರಿ ಮಸೀದಿ ಕ್ರಿಯಾಸಮಿತಿ (ಎಐಎಂಬಿಎಸಿ) ಹೇಳಿವೆ.

ಇತ್ತ ಬಾಬರಿ ಮಸೀದಿ ವಿವಾದವನ್ನು ಬಗೆ ಹರಿಸುವ ನಿಟ್ಟಿನಲ್ಲಿ ಆರ್ಟ್‌ ಆಫ್ ಲಿವಿಂಗ್‌ನ ಸ್ಥಾಪಕ ಶ್ರೀ ಶ್ರೀ ರವಿಶಂಕರ್‌ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರೊಳಗಿನ ಮಾತುಕತೆ ನಡೆಯುತ್ತಿರುವಂತೆಯೇ ಈ ಹೇಳಿಕೆಗಳು ಬಂದಿರುವುದು ವಿವಾದವನ್ನು ಇನ್ನಷ್ಟು ಜಟಿಲಗೊಳಿಸಿವೆ.
ಶ್ರೀ ಶ್ರೀ ರವಿಶಂಕರ್‌ ಅವರಿಂದ ನಮಗೆ ಈ ತನಕ ಯಾವುದೇ ಪ್ರಸ್ತಾವ ಅಥವಾ ಸಂಧಾನ ಸೂತ್ರ ಬಂದಿಲ್ಲ. ಅಯೋಧ್ಯೆಯಲ್ಲಿನ ಬಾಬರಿ ಮಸೀದಿ ಜಾಗದ ಮೇಲಿರುವ ಕಾನೂನು ಹಕ್ಕನ್ನು ಮುಸ್ಲಿಮರು ಬಿಟುಕೊಡಲು ಅಥವಾ ಒಪ್ಪಿಸಲು ಸಿದ್ಧರಿಲ್ಲ ಎಂಬುದನ್ನು ನಾವು ಈಗಾಗಲೇ ಶ್ರೀ ಶ್ರೀ ರವಿಶಂಕರ್‌ ಅವರಿಗೆ ಸ್ಪಷ್ಟವಾಗಿ ತಿಳಿಸಿದ್ದೇವೆ. ಹಾಗಿದ್ದರೂ ಅಯೋಧ್ಯೆ – ಬಾಬರಿ ವಿವಾದವನ್ನು ಬಗೆಹರಿಸುವ ಪ್ರಯತ್ನಗಳನ್ನು ಮುಸ್ಲಿಮರು ಸ್ವಾಗತಿಸುತ್ತಾರೆ ಎಂದು ಎಐಬಿಂಎಸಿ ಸಂಚಾಲಕ ಹಾಗೂ ಎಐಎಂಪಿಎಲ್‌ಬಿ ಕಾರ್ಯದರ್ಶಿ ಜಾಫ್ರೆàಯಾಬ್‌ ಜಿಲಾನಿ ಹೇಳಿದರು.
ಅಲಹಾಬಾದ್‌ ಹೈಕೋರ್ಟ್‌ನ 2010ರ ಆದೇಶದ ಪ್ರಕಾರ ಮುಸ್ಲಿಮರಿಗೆ ಅಯೋಧ್ಯೆಯಲ್ಲಿನ ಬಾಬರಿ ಮಸೀದಿಯ 2.77 ಎಕರೆ ಜಾಗದ ಮೇಲೆ ಕಾನೂನುಸಮ್ಮತ ಹಕ್ಕಿದೆ. ಅದನ್ನು ಮುಸ್ಲಿಮರು ಎಷ್ಟು ಮಾತ್ರಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಜಿಲಾನಿ ಪುನರುಚ್ಚರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response