ಜಾಲತಾಣಗಳ ಉಪಯೋಗಕ್ಕಿಂತ ಇತ್ತೀಚೆಗೆ ದುರ್ಬಳಕೆಯೇ ಹೆಚ್ಚಾಗ್ತಿದೆ. ಅಂತೆಯೇ ನಾಲ್ವರು ಯುವಕರ ಗುಂಪೊಂದು ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯನ್ನು ಆಕರ್ಷಿಸಿ, ನಂತರ ಅವರೊಂದಿಗೆ ಸ್ನೇಹ ಬೆಳಸಿ, ಲೈಂಗಿಕ ಕಿರುಕುಳ ನೀಡಿದ ಘಟನೆ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ.
ಸಧ್ಯ ಈ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸತೀಶ್, ಸಬರಿರಾಜನ್, ತಿರುನಾವುಕ್ಕರಸು, ಮತ್ತು ವಸಂತ್ ಕುಮಾರ್ ಎಂದು ತಿಳಿದು ಬಂದಿದೆ. ಆದ್ರೆ ಈ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದೆ.
ಕಾಲೇಜು ವಿದ್ಯಾರ್ಥಿನಿಯರು, ಉದ್ಯೋಗಸ್ಥ ಮಹಿಳೆಯರು ಈ ಆರೋಪಿಗಳ ಟಾರ್ಗೆಟ್ ಆಗಿದ್ದರು. ಈ ಆರೋಪಿಗಳು ಮಹಿಳೆಯರ ಹೆಸರಲ್ಲಿ ನಕಲಿ ಫೇಸ್ ಬುಕ್ ಅಕೌಂಟ್ ತೆರೆಯುತ್ತಿದ್ದರು.ನಂತರ ಹುಡುಗಿಯರಿಗೆ ರಿಕ್ವೆಸ್ಟ್ ಕಳಿಸಿ ಅವರೊಂದಿಗೆ ಚಾಟ್ ಮಾಡಲು ಶುರು ಮಾಡ್ತಿದ್ದರು.
ಸ್ನೇಹಿತರಂತೆ ಮಾತನಾಡ್ತಾ, ಹುಡುಗಿಯರನ್ನು ನಂಬಿಸಿ ಭೇಟಿಯಾಗುವಂತೆ ಒತ್ತಾಯಿಸುತ್ತಿದ್ರು. ಆಮೇಲೆ ಆ ಯುವತಿಯರನ್ನು ಅರಣ್ಯ ಪ್ರದೇಶದಲ್ಲಿರುವ ಹೋಟೆಲ್ಗಳಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡ್ತಿದ್ದರು ಎನ್ನಲಾಗಿದೆ.