ಬೆಳ್ತಂಗಡಿ: ಧರ್ಮಸ್ಥಳ ಸಮೀಪದ ಕನ್ಯಾಡಿ ಬಳಿಯಿರುವ ಬೆಂಕಿ ಕಡ್ಡಿ ತಯಾರಿಕಾ ಘಟಕದಲ್ಲಿ ಬೆಂಕಿ ದುರಂತ ಸಂಭವಿಸಿ ಅರಣ್ಯ ಪ್ರದೇಶ ಸುಟ್ಟುಹೋಗಿದೆ.
ಕನ್ಯಾಡಿಯ ವಿನಾಯಕ ಇಂಡಸ್ಟ್ರೀಸ್ನ ಘಟಕದಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಅವಘಡ ಸಂಭವಿಸಿತ್ತು. ಘಟಕದ ಬಾಯ್ಲರ್ನಿಂದ ಹಾರಿದ ಕಿಡಿಯು ಸ್ಥಳದಲ್ಲಿದ್ದ ಮರದ ತ್ಯಾಜ್ಯಕ್ಕೆ ತಗಲಿದ ಪರಿಣಾಮ ತ್ಯಾಜ್ಯ ಸುಟ್ಟು ಸಮೀಪದ ಅರಣ್ಯ ಪ್ರದೇಶಕ್ಕೂ ಬೆಂಕಿ ವ್ಯಾಪಿಸಿತು.
ಬೆಂಕಿ ನಂದಿಸಲು ಅಗ್ನಿಶಾಮಕ ತಂಡ ಹರಸಾಹಸ ಪಟ್ಟಿದ್ದು, ಮರದ ತ್ಯಾಜ್ಯ ಹಾಗೂ ಕಡ್ಡಿ ಸುಟ್ಟು ಹೋಗಿವೆ. ಸುಮಾರು ಎರಡು ಎಕರೆಗೂ ಹೆಚ್ಚಿನ ಅರಣ್ಯ ಪ್ರದೇಶ ಕರಟಿದೆ.
ದುರಂತ ಸಂಭವಿಸಿದ ಪ್ರದೇಶದ ಸಮೀಪದಲ್ಲೇ ಗ್ಯಾಸ್ಬಂಕ್ ಇದ್ದುದು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿತ್ತು. ಅಗ್ನಿ ಶಾಮಕ ವಾಹನದಲ್ಲಿ ನೀರು ಖಾಲಿಯಾದಾಗ ಸ್ಥಳೀಯ ಪವಿತ್ರ ಕನ್ಸ್ಟ್ರಕ್ಷನ್ನವರು 2 ಟ್ಯಾಂಕರ್ ನಲ್ಲಿ 12 ಸಾ.ಲೀ. ನೀರು ಒದಗಿ ಸಿದರು. ಸಂಜೆ 5 ಗಂಟೆ ರವರೆಗೂ ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರಿದಿತ್ತು.