ಮಂಗಳೂರು: ನಗರದೆಲ್ಲೆಡೆ ಎಗ್ಗಿಲ್ಲದೆ ನಡೆಯುತ್ತಿದ್ದ ಜೀಬ್ರಾ ಕ್ರಾಸ್ ಉಲ್ಲಂಘನೆ ಹಾಗೂ ವಾಹನಗಳ ಕರ್ಕಶ ಹಾರ್ನ್ಗಳ ಬಗ್ಗೆ ಪೊಲೀಸರುರಿಂದ ಕಡಿವಾಣ ಬಿದ್ದಿದೆ.
ಜೀಬ್ರಾ ಕ್ರಾಸ್ ಉಲ್ಲಂಘನೆ ಮಾಡಿದ 138 ಪ್ರಕರಣ ಹಾಗೂ ಕರ್ಕಶ ಹಾರ್ನ್ ಸಹಿತ ಚಾಲನೆ ಮಾಡುತ್ತಿದ್ದ 40 ಪ್ರಕರಣಗಳನ್ನು ಇಂದು ನಗರ ಟ್ರಾಫಿಕ್ ಪೊಲೀಸರು ಪತ್ತೆ ಹಚ್ಚಿ ಕ್ರಮ ಕೈಗೊಂಡಿದ್ದಾರೆ.
ಸುಮಾರು 40 ವಾಹನಗಳ ಹಾರ್ನ್ ಕಳಚಿದ್ದಾರೆ. ನಗರದ ವಿವಿಧ ಕಡೆಗಳಲ್ಲಿ ಪತ್ತೆಯಾದ ಎಲ್ಲಾ ವಾಹನಗಳ ವಿರುದ್ಧ ಪ್ರಕರಣ ದಾಖಲಾಗಿದೆ.