Wednesday, November 27, 2024
ಸುದ್ದಿ

ಮಸೂದ್‌ಗೆ ಜಾಗತಿಕ ಉಗ್ರ ಹಣೆಪಟ್ಟಿ ಕಟ್ಟುವ ಪ್ರಯತ್ನಕ್ಕೆ ಮತ್ತೆ ಚೀನಾ ತಡೆ – ಕಹಳೆ ನ್ಯೂಸ್

ಹೊಸದಿಲ್ಲಿ: ಪಾಕಿಸ್ತಾನ ಮೂಲದ ಜೈಶ್-ಇ- ಮೊಹ್ಮದ್ (ಜೆಇಎಂ) ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್‌ಗೆ ಜಾಗತಿಕ ಭಯೋತ್ಪಾದಕ ಎಂಬ ಹಣೆಪಟ್ಟಿ ಕಟ್ಟುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಪ್ರಯತ್ನವನ್ನು ಚೀನಾ ಮತ್ತೆ ತಡೆದಿದೆ.

ಭದ್ರತಾ ಮಂಡಳಿಯ ಈ ಪ್ರಯತ್ನವನ್ನು ಚೀನಾ ತಡೆಯುತ್ತಿರುವುದು ಇದು ನಾಲ್ಕನೇ ಬಾರಿ. ಇದು ಭಾರತದ ಜತೆಗಿನ ದ್ವಿಪಕ್ಷೀಯ ಸಂಬಂಧ ಹದಗೆಡಲು ಕಾರಣವಾಗುವ ಸಾಧ್ಯತೆ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಒಂದು ಸದಸ್ಯ ರಾಷ್ಟ್ರ ಈ ಪ್ರಸ್ತಾವನೆಗೆ ತಡೆ ಒಡ್ಡಿದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಇಸ್ಲಾಮಿಕ್ ಸ್ಟೇಟ್ ಮತ್ತು ಅಲ್ ಖೈದಾ ನಿರ್ಬಂಧ ಸಮಿತಿ, ಅಝರ್ ಮೇಲೆ ದಿಗ್ಬಂಧನ ವಿಧಿಸಲು ಸಾಧ್ಯವಾಗದೇ ಇರುವ ಬಗ್ಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಮಿತಿ ನೀಡಿರುವ ಹೇಳಿಕೆಯಲ್ಲಿ ಅಧಿಕೃತವಾಗಿ ಎಲ್ಲೂ ಚೀನಾ ದೇಶದ ಹೆಸರನ್ನು ಬಹಿರಂಗಪಡಿಸಿಲ್ಲ. ದಿಗ್ಬಂಧನ ಸಮಿತಿಯ ಶಿಷ್ಟಾಚಾರಕ್ಕೆ ಅನುಗುಣವಾಗಿ ಚೀನಾ ಹೆಸರು ಹೇಳಿಲ್ಲ. ಆದರೆ ಅಝರ್‌ಗೆ ಜಾಗತಿಕ ಉಗ್ರ ಹಣೆಪಟ್ಟಿ ಕಟ್ಟುವ ಪ್ರಸ್ತಾವ ತಡೆಗೆ ಚೀನಾ ಕಾರಣ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಇದರಿಂದಾಗಿ ಫೆ.14ರ ಪುಲ್ವಾಮ ದಾಳಿಯ ಹೊಣೆ ಹೊತ್ತ ಉಗ್ರ ಸಂಘಟನೆ ಜೆಇಎಂ ಮುಖಂಡನನ್ನು ತಡೆಯಲು ಅಂತರ್ ರಾಷ್ಟ್ರೀಯ ಸಮುದಾಯಕ್ಕೆ ಸಾಧ್ಯವಾಗುವುದಿಲ್ಲ ಎಂದು ಪ್ರಕಟಣೆ ಹೇಳಿದೆ.

ಈ ಪ್ರಸ್ತಾವನೆಯನು ಮುಂದಿಟ್ಟ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಎಲ್ಲ ಸದಸ್ಯರಿಗೆ ಮತ್ತು ಸಹ ಪ್ರಾಯೋಜಕತ್ವ ನೀಡಿದ ಎಲ್ಲ ಸದಸ್ಯೇತರ ದೇಶಗಳಿಗೆ ಭಾರತ ಇತ್ತೀಚೆಗೆ ಕೃತಜ್ಞತೆ ಸಲ್ಲಿಸಿತ್ತು. ಹೇಯ ಕೃತ್ಯಗಳಲ್ಲಿ ಷಾಮೀಲಾಗಿರುವ ಉಗ್ರ ಸಂಘಟನೆಗಳ ಮುಖಂಡರಿಗೆ ದಿಗ್ಬಂಧನ ವಿಧಿಸುವಂತೆ ಒತ್ತಡ ಮುಂದುವರಿಸಲಾಗುವುದು ಎಂದು ಭಾರತ ಸ್ಪಷ್ಟಪಡಿಸಿದೆ.