Saturday, November 16, 2024
ಸುದ್ದಿ

ಕಚೇರಿಯಲ್ಲೇ ಗೋಡ್ಸೆ ಪ್ರತಿಮೆ ಸ್ಥಾಪಿಸಿದ ಹಿಂದೂ ಮಹಾಸಭಾ | ಪರ ವಿರೋಧ ಹೋರಾಟಕ್ಕೆ ನಾಂದಿ

ಭೋಪಾಲ್‌ : ಬಲಪಂಥೀಯ ಸಂಘಟನೆ ಎನಿಸಿರುವ ಅಖೀಲ ಭಾರತೀಯ ಹಿಂದೂ ಮಹಾಸಭಾ ಗ್ವಾಲಿಯರ್‌ನಲ್ಲಿನ ತನ್ನ ಕಾರ್ಯಾಲಯದಲ್ಲಿ ಮಹಾತ್ಮಾ ಗಾಂಧಿ ಹಂತಕ ನತ್ತೂರಾಮ್‌ ಗೋಡ್ಸೆ ಯ ಎದೆಮಟ್ಟದ ಪ್ರತಿಮೆಯನ್ನು ಸ್ಥಾಪಿಸಿದೆ.

ಗೋಡ್ಸೆ ಪ್ರತಿಮೆಯನ್ನು ಸ್ಥಾಪಿಸಿದ ಬಳಿಕ ಸಂಘಟನೆಯ ನಾಯಕರು ಗೋಡ್ಸೆಯ ಪುಣ್ಯ ತಿಥಿಯನ್ನು ಆಚರಿಸಿದರು ಎಂದು ಎಎನ್‌ಐ ವರದಿ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನತ್ತೂರಾಮ್‌ ಗೋಡ್ಸೆ ಹೆಸರಿನಲ್ಲಿ ದೇವಸ್ಥಾನವೊಂದನ್ನು ನಿರ್ಮಿಸುವ ಹಿಂದೂ ಮಹಾಸಭಾ ಪ್ರಸ್ತಾವಕ್ಕೆ ಈ ಹಿಂದೆ ಗ್ವಾಲಿಯರ್‌ ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಗೋಡ್ಸೆಯ 32 ಇಂಚು ಎತ್ತರದ ಎದೆಮಟ್ಟದ ಮೂರ್ತಿಯನ್ನು ಕಾರ್ಯಾಲಯದಲ್ಲಿ ಸ್ಥಾಪಿಸಿದ ಬಳಿಕ ಮಾತನಾಡಿದ ಹಿಂದೂ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಜೈವೀರ್‌ ಭಾರಧ್ವಾಜ್‌, “ನ.9ರಂದು ನಾವು ಗೋಡ್ಸೆ ದೇವಳವನ್ನು ನಿರ್ಮಿಸಲು ಅನುಮತಿ ಕೋರಿದ್ದೆವು; ಆದರೆ ಜಿಲ್ಲಾಡಳಿತ ನಮ್ಮ ಮನವಿಯನ್ನು ತಿರಸ್ಕರಿಸಿತು’ ಎಂದು ಹೇಳಿದರು.

ಈಗ ನಮ್ಮ ಕಾರ್ಯಾಲಯದಲ್ಲೇ ನಾವು ಗೋಡ್ಸೆ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ಆತನಿಗೆ ದೇವಳವನ್ನು ನಿರ್ಮಿಸಿದಂತಾಗಿದೆ ಎಂದು ಜೈವೀರ್‌ ಭಾರದ್ವಾಜ್‌ ಹೇಳಿದರು.

Leave a Response