Thursday, November 28, 2024
ಸುದ್ದಿ

ಸರ್ ಉಂದು ಆನಿ ರಾತ್ರೆ ನಡೆತಿನ ಕಥೆನಾ? ಒಂಜಿ ಸಾಕ್ಷಿಲಾ ಒರಿಯರೆ ಬಲ್ಲಿ – ಕಹಳೆ ನ್ಯೂಸ್

ಉಡುಪಿಯಲ್ಲಿ ಕೆಲವು ತಿಂಗಳ ಹಿಂದೆ ಒಂದು ಭೀಕರ ಮರ್ಡರ್ ಕಹಾನಿ ನಡೆದಿತ್ತು. ಅಲ್ಲದೇ ಆ ಸುದ್ದಿ ರಾಷ್ಟç ಮಟ್ಟದಲ್ಲೂ ಚರ್ಚೆಗೆ ಕಾರಣವಾಗಿತ್ತು. ಉಡುಪಿಯ ಉದ್ಯಮಿಯೊಬ್ಬರನ್ನು ಸ್ವತಃ ಹೆಂಡತಿ ಮಗನೇ ಹತ್ಯೆ ಮಾಡಿ ಸುಟ್ಟು ಹಾಕಿದ ಸಂಗತಿ ಅನೇಕ ಕಡೆ ವಿವಾದಕ್ಕೂ ಗ್ರಾಸವಾಗಿತ್ತು.

ಇದೀಗ ಇದೇ ತಿರುಳನ್ನ ಹಿಡಿದು ಕೋಸ್ಟಲ್ ವುಡ್‌ನಲ್ಲಿ ಚಿತ್ರವೊಂದು ರ‍್ತಾ ಇದೆ. ಈ ಕಥೆಗೆ ಉದ್ಯಮಿ ಹತ್ಯೆಯ ಕಥೆಯನ್ನ ಬೆರೆಸಲಾಗಿದ್ಯ ಅನ್ನುವ ಅನುಮಾನ ಇದೀಗ ಎಲ್ಲೆಡೆ ಮೂಡ್ತಾ ಇದೆ. ಈ ಪ್ರಶ್ನೆಗೆ ಸದ್ಯ ಕೋಸ್ಟಲ್‌ವುಡ್ ಯಾವುದೇ ಉತ್ತರ ನೀಡಿಲ್ಲ. ಸಿನೆಮಾ ನೋಡಿದ ಮೇಲೆ ಅಂದಿದ್ದಾರಷ್ಟೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದು ಬೇರಾವ ಸಿನೆಮಾದ ಕೇತಯೂ ಅಲ್ಲ. ಬದಲಾಗಿ ಕೋಸ್ಟಲ್‌ವುಡ್‌ನಲ್ಲಿ ರ‍್ತಾ ಇರೋ ಗೋಲ್ ಮಾಲ್ ಸಿನೆಮಾದ ಸಂಗತಿ.ತುಳು ಚಿತ್ರರಂಗದ ಅದ್ದೂರಿ ಸಿನೆಮಾ ಎಂದೇ ಹೇಳಲಾಗುತ್ತಿರುವ ಮಂಜುನಾಥ ನಾಯಕ್ ಕಾರ್ಕಳ ಮತ್ತು ಅಕ್ಷಯ ಪ್ರಭು ಅಜೆಕಾರು ನಿರ್ಮಾಣದಲ್ಲಿ ರಮಾನಂದ ನಾಯಕ್ ನಿರ್ದೇಶನದಲ್ಲಿ ತಯಾರಾದ ಸಿನೆಮಾ. ಈ ಸಿನೆಮಾದ ಟೀಸರ್‌ನಲ್ಲಿ ಮಾತು ಕಡಿಮೆ. ಆದರೆ ಇರುವ ಒಂದೆರಡು ಮಾತು ಮತ್ತು ದೃಶ್ಯಗಳು ಉಡುಪಿ ಮೂಲದ ಮರ್ಡರ್ ಕಥೆಗೆ ಲಿಂಕ್ ಪಡೆದಿವೆ ಎಂಬುದು ಈಗಿನ ಕುತೂಹಲಕ್ಕೆ ಕಾರಣ.

“ಸರ್ ಉಂದು ಆನಿ ರಾತ್ರೆ ನಡೆತಿನ ಕಥೆನಾ? ಎಂಬ ಸಂಭಾಷಣೆ ಇದ್ದು ಉಡುಪಿ ಮೂಲದ ಭಾಸ್ಕರ್ ಶೆಟ್ಟಿ ಸಾವಿನ ಕಥೆಗೆ ಸಾಮ್ಯತೆ ಇದ್ದಂತೆ ಭಾಸವಾಗುತ್ತಿದೆ. ಇನ್ನೂ ಈ ಚಿತ್ರದಲ್ಲಿ ನಟ ಸಾಯಿಕುಮಾರ್ ಕೂಡ ಅಭಿನಯಿಸಿದ್ದಾರೆ. ಇನ್ನುಳಿದಂತೆ ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಸತೀಶ್ ಬಂದಲೆ, ಸುನೀಲ್ ನೆಲ್ಲಿಗುಡ್ಡೆ, ಸುಂದರ ರೈ ಮಂದಾರ ಮುಂತಾದ ಖ್ಯಾತ ಕಲಾವಿದರು ಸಿನೆಮಾದಲ್ಲಿದ್ದಾರೆ.

‘ಪಿಲಿಬೈಲ್ ಯಮುನಕ್ಕ’ ಖ್ಯಾತಿಯ ಪೃಥ್ವಿ ಅಂಬರ್ ಸಿನೆಮಾದಲ್ಲಿ ನಾಯಕ ನಟನಾಗಿದ್ದು, ಶ್ರೇಯಾ ಅಂಚನ್ ನಾಯಕಿ. ಸುನಾದ್ ಗೌತಮ್ ಸಂಗೀತದ ಜತೆಗೆ ಛಾಯಾಗ್ರಹಣದಲ್ಲಿ ದುಡಿದಿದ್ದಾರೆ. ಶಂಕರ್ ನಾರಾಯಣ್ ಪೆರ್ಡೂರು ಸಂಕಲನ ಮಾಡಿದ್ದಾರೆ. ಜೊತೆಗೆ ಶಿವು ಸಾಹಸ ದೃಶ್ಯ ಸಂಯೋಜಿಸಿದ್ದಾರೆ. ಕಲಾ ನಿರ್ದೇಶಕರಾಗಿ ದಿನೇಶ್ ಜೋಗಿ ದುಡಿದಿದ್ದಾರೆ.

ನಿಜವಾಗಿಯೂ ಸಿನೆಮಾದಲ್ಲಿ ಯಾವ ಕಥೆಯನ್ನ ಸೇರಿಸಲಾಗಿದೆ. ಉಡುಪಿ ಉದ್ಯಮಿ ಸಾವಿನ ರಹಸ್ಯವನ್ನ ಭೇದಿಸಲಾಗಿದ್ಯ ಅನ್ನೋದನ್ನ ಸಿನೆಮಾ ಬಿಡುಗಡೆ ಆಗೋವರೆಗೂ ಕಾಯ್ಬೇಕಷ್ಟೇ..
ರಕ್ಷಿತಾ ಆಳ್ವಾ ಫಿಲ್ಮ್ ಬ್ಯೂರೋ ಕಹಳೆ ನ್ಯೂಸ್