ಇಚಿಲಂಪಾಡಿಯಲ್ಲಿ ರಸ್ತೆ ಮತ್ತು ಸೇತುವೆ ವಿಚಾರ ಗೊಂದಲ: ವರ್ಷ ಕಳೆದ್ರೂ ಬಗೆ ಹರಿದಿಲ್ಲ ಕಾಮಗಾರಿ ಆಟ – ಕಹಳೆ ನ್ಯೂಸ್
ಇಜಿಲಂಪಾಡಿ: ದಕ್ಷಿಣ ಕನ್ನಡ ಜಿಲ್ಲೆ, ಕಡಬ ತಾಲೂಕು ಇಜಿಲಂಪಾಡಿ ಮಾನಡ್ಕ ರಸ್ತೆ ಹಾಗು ಸೇತುವೆ ವಿಚಾರದಲ್ಲಿ ಬಾರಿ ಗೊಂದಲ ವಿಚಾರಕ್ಕೆ ಸಂಬಂಧ ಪಟ್ಟಂತೆ ಕರಾವಳಿ ಪ್ರಾಧಿಕಾರದ ಮಂಗಳೂರು ಹಾಗು ತಾಲೂಕು ಪಂಚಾಯತ್ ಸದಸ್ಯೆ ವಲ್ಸಮ್ಮ ಭೇಟಿ ಸ್ಥಳ ಪರಿಶೀಲನೆ ನಡೆಸಿ 15 ದಿನಗಳ ಒಳಗೆ ಕಾಮಗಾರಿ ಪ್ರಾರಂಭಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಆದ್ರೆ ಮಾರ್ಚ್ 12ರಂದು ನೀತಿ ಸಂಹಿತೆ ಜಾರಿ ಇರುವಾಗ ಜನಪ್ರತಿನಿಧಿಗಳು ಯಾಕೆ ಅಧಿಕಾರಿಯವರನ್ನು ಕರೆ ತಂದು ಕಾಮಗಾರಿಯನ್ನು ಪರಿಶೀಲಿಸಬೇಕು? ನೀತಿಸಂಹಿತೆ ಉಲ್ಲಂಘನೆ ಮಾಡಿದ ಹಾಗೆ ಆಗಿದೆ.
ನೀತಿಸಂಹಿತೆ ಜಾರಿಯಲ್ಲಿ ಇರುವಾಗ ಯಾವುದೇ ಜನಪ್ರತಿನಿಧಿಗಳು ಭೇಟಿ ಕೊಡಬಾರದು ಎಂದು ರಾಜ್ಯ ನೀತಿ ತಂಡದ ಬೆಂಗಳೂರು ಇಲ್ಲಿನ ಅಧ್ಯಕ್ಷರಾದ ಹೇಳಿದ್ದಾರೆ.
ಒಟ್ಟಾರೆ ಜನಪ್ರತಿನಿಧಿಗಳ ಮತ್ತು ಗುತ್ತಿಗೆದಾರರ ಗುದ್ದಾಟದಲ್ಲಿ ಕಾಮಗಾರಿ 1 ವರ್ಷ 2 ತಿಂಗಳ ವಿಳಂಬವಾಗಿದೆ ಎಂದು ಸಾರ್ವಜನಿಕರು ಆಕ್ರೊಶ ಪಡಿಸಿದರು.
15 ದಿನದೊಳಗೆ ಕಾಮಗಾರಿ ಪ್ರಾರಂಭಿಸದಿದ್ದರೆ ಇಜಿಲಂಪಾಡಿ ಪೇಟೆ ರಸ್ತೆ ಬದಿಯಲ್ಲಿ ಬಟ್ಟೆ ಹಾಕಿ ಭಿಕ್ಷೆ ಬೇಡಿ ಇವರಿಗೆ ಹಣ ಸಂದಾಯ ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.