ಫ್ರೆಂಡ್ಸ್ ಕ್ಲಬ್ ಕೇನ್ಯ ಹಾಗೂ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸುಳ್ಯ ಇದರ ಜಂಟಿಯಾಶ್ರಯದಲ್ಲಿ ಮುಕ್ತ ಕಬಡ್ಡಿ ಪಂದ್ಯಾಟ ಹಾಗೂ ಮಹಿಳೆಯರ ಮುಕ್ತ ತ್ರೋಬಾಲ್ ಪಂದ್ಯಾಟ ಕೇನ್ಯ ಶಾಲಾ ವಠಾರದಲ್ಲಿ ಮಾರ್ಚ್ 17 ರಂದು ನಡೆಯಲಿದೆ.
ಈ ಪಂದ್ಯಾಟದ ಉದ್ಘಾಟನೆಯನ್ನು ಸುಬ್ರಹ್ಮಣ್ಯದ ಅನುಗ್ರಹ ಕನ್ಸ್ಟ್ರಕ್ಷನ್ನ ರವಿ ಕುಕ್ಕೆಪದವು ನೆರವೇರಿಸಲಿದ್ದಾರೆ. ಇನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯದ ಅಮೆಚೂರು ಕಬಡ್ಡಿ ಅಸೋಸಿಯೇಶನ್ನ ಪ್ರಧಾನ ಕಾರ್ಯದರ್ಶಿ ಕೆಟಿ ವಿಶ್ವನಾಥ ವಹಿಸಲಿದ್ದಾರೆ.
ಪ್ರಗತಿಪರ ಕೃಷಿಕರಾದ ಇಂದಿರಾ ಜೆ. ರೈ ಕೇನ್ಯಗುತ್ತ, ಬಳ್ಪ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ತಾರಾ ಬಿ. ರೈ, ಸುಳ್ಯದ ಅಕ್ರಮ ಸಕ್ರಮ ಸಮಿತಿಯ ಸದಸ್ಯ ಸುಧೀರ್ ರೈ ಮೇನಾಲ, ಸುಬ್ರಹ್ಮಣ್ಯ ಠಾಣೆ ಪೊಲೀಸ್ ಅಧಿಕಾರಿ ಬಸವರಾಜ್ ವಂದಾಲ್, ಮಂಗಳೂರಿನ ಆರಾಧನಾ ಪರಿಷತ್ ಸದಸ್ಯ ವಿಮಲಾ ರಂಗಯ್ಯ, ಕೇನ್ಯದ ಸ್ನೇಹಿತೆಯರ ಕೂಟದ ಅಧ್ಯಕ್ಷೆ ಭಾರತಿ ಪಿವಿ, ವಿಜಯಬ್ಯಾಂಕ್ನ ನಿವೃತ್ತಿ ಅಧಿಕಾರಿ ವಿಮಲ್ ಆರ್. ರೈ ಹಾಗೂ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಉದ್ಯಮಿ ಶ್ರೀ ವಿನಯಕುಮಾರ್ ಕೇನ್ಯ ಅವರು ಎಲ್ಲಾ ಕ್ರೀಡಾಭಿಮಾನಿಗಳಿಗೆ ಆದರದ ಸ್ವಾಗತ ಕೋರಿದ್ದಾರೆ.