Thursday, November 28, 2024
ಸುದ್ದಿ

ನಿಡ್ಪಳಿ ಶ್ರೀ ಶಾಂತದುರ್ಗ ದೈವ ದೇವರ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ: ಧಾರ್ಮಿಕ ಕಾರ್ಯಕ್ರಮ – ಕಹಳೆ ನ್ಯೂಸ್

ನಿಡ್ಪಳ್ಳಿ: ಬ್ರಹ್ಮಕಲಶದಂತ ದೊಡ್ಡ ಕಾರ್ಯಕ್ರಮದ ನೇತೃತ್ವವಹಿಸಿಕೊಳ್ಳುವವನಿಗೆ ನೋವು ನುಂಗುವ ,ಸದಾ ಕಾಲ ನಗುವ ಅಭ್ಯಾಸ ಇರಬೇಕಾಗುತ್ತದೆ. ಜನರ ಪ್ರೀತಿಗಾಗಿ ಯಾವತ್ತೂ ನೋವು ತಿನ್ನಲು ತಯಾರಾಗಿದ್ದೇನೆ ಎಂದು ನಿಡ್ಪಳಿ ಶ್ರೀ ಶಾಂತದುರ್ಗ ದೇವಸ್ಥಾನ ಮತ್ತು ಶ್ರೀ ಕಿನ್ನಿ ಮಾಣಿ ಪೂಮಾಣಿ ಪರಿವಾರ ದೈವಸ್ಥಾನ ಇದರ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಹೇಳಿದರು.

ಇವರು ನಿಡ್ಪಳಿ ಶ್ರೀ ಶಾಂತದುರ್ಗ ದೇವಸ್ಥಾನ ಮತ್ತು ಶ್ರೀ ಕಿನ್ನಿ ಮಾಣಿ ಪೂಮಾಣಿ ಪರಿವಾರ ದೈವಸ್ಥಾನದ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವದ 6 ನೇ ದಿನದಂದು ಸಂಜೆ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಿಡ್ಪಳ್ಳಿಯಲ್ಲಿ ಬಂಗಾರದ ಗುಣ ಹೊಂದಿರುವ ಜನರಿದ್ದಾರೆ, ಇವತ್ತು ಎಲ್ಲರೂ ಖೂಷಿಪಡುವಂತಾಗಿದೆ. ಕೀರ್ತಿಶೇಷರಾದ ಕೃಷ್ಣ ಶೆಟ್ಟಿ ನುಳಿಯಾಲುರವರ ಆಸೆಗಳನ್ನ ನಾವೆಲ್ಲಾ ಒಟ್ಟಾಗಿ ಸೆರವೇರಿಸುವ ಕರ್ತವ್ಯ ನಮ್ಮಲ್ಲಿದೆ. ಅವರ ಕಾರ್ಯ ಸಾಧನಗಳನ್ನು ಸ್ಮರಿಸಿಕೊಳ್ಳಬೇಕಾಗಿದೆ ಎಂದರು.

ಇನ್ನು ಇದೇ ಸಂದರ್ಭದಲ್ಲಿ ಅವಕಾಶ ಸಿಕ್ಕರೆ ಇನ್ನೊಂದು ಕಡೆಯು ಬ್ರಹ್ಮಕಲಶದ ಜವಬ್ಧಾರಿ ವಹಿಸಿಕೊಳ್ಳುತ್ತೇನೆ. ಕಾರ್ಯಕ್ರಮದ ಯಶಸ್ವಿಗಾಗಿ ಅನೇಕ ಜನರಿಗೆ ನೋವು ನೀಡಿರಬಹುದು, ನನ್ನಿಂದ ಏನಾದರೂ ತಪ್ಪಾಗಿದ್ದಲ್ಲಿ ತಾಯಿ ಧಾಂತಾದುರ್ಗೆ ಮತ್ತು ಇಲ್ಲಿನ ಜನತೆ ಕ್ಷಮಿಸಬೇಕು ಎಂದು ಅತ್ಯಂತ ಮನಃಪೂರ್ವಕವಾಗಿ ಕೇಳಿಕೊಂಡರು.

ತಾಯಿಯ ಆಶಿರ್ವಾದವಿದ್ದಲ್ಲಿ ದೇವಿಯ ಅನುಗ್ರಹವು ಇರುತ್ತದೆ. ಮನೆಯ ತಾಯಿಗಿಂತ ಮಿಗಿಲಾದ ದೇವರಿಲ್ಲ, ಯಾವ ಕಾರ್ಯಕ್ಕೂ ಮುನ್ನ ನಮಗೆ ಜನ್ಮ ನೀಡಿದ ಯಾತಿಯ ಆಶೀರ್ವಾದವಿರಬೇಕು, ಹಾಗಿದ್ದಲ್ಲಿ ಮಾತ್ರ ತಾಯಿ ಶಾಂತದುರ್ಗೆಯ ಅನುಗ್ರಹವು ಪ್ರಾಪ್ತಿಯಾಗುತ್ತದೆ ಎಂದರು.

ಇನ್ನು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನೋಟರಿ ನ್ಯಾಯವಾದಿ ಚಿದಾನಂದ ಬೈಲಾಡಿಯವರು ಮಾತಾನಾಡಿ, ಜೀವನದಲ್ಲಿ ಚಿಂತನೆ ಮಾಡಿದಾಗ ಜೀವನ ಸಾರ್ಥಕತೆ ಕಾಣಲು ಸಾಧ್ಯ. ಇದು ನಿಡ್ಪಳ್ಳಿಯಲ್ಲಿ ಅಕ್ಷರಶಹ ನಿಜವಾಗಿದೆ. ನಿಡ್ಪಳ್ಳಿ ಗ್ರಾಮವನ್ನು ನಿಡ್ಪಳ್ಳಿ ಕ್ಷೇತ್ರವಾಗಿ ಪರಿವರ್ತಿಸಿದ ಇಲ್ಲಿನ ಜನರು ನಿಜಕ್ಕೂ ಅಭಿನಂದನಾರ್ಹರು, ಶ್ರೀ ದೇವಿಯು ಊರಿನ ಜನತೆಗೆ ಶಕ್ತಿಯನ್ನ ನೀಡಲಿ ಎಂದು ಶುಭ ಹಾರೈಸಿದರು.

ಮುಳಿಯ ಜ್ಯುವೆಲ್ರ‍್ಸ್ನ ಕೇಶವ ಪ್ರಸಾದ್ ಮುಳಿಯರವರು ಮಾತನಾಡಿ ನಿಡ್ಪಳ್ಳಿ ಜನತೆಯ ಬಗ್ಗಟ್ಟಿ ಇಲ್ಲಿನ ಅಲಂಕಾರವ್ನ್ನ ನೋಡಿದಾಗಲೇ ತಿಳಿಯುತ್ತದೆ. ದೇವಾಲಯದ ಅಭಿವೃದ್ಧಿ ಕಾರ್ಯಗಳು ಇಲ್ಲಿಗೆ ನಿಲ್ಲದೆ ನಿರಂತರವಾಗಿ ನಡೆಯುತ್ತಿರಲಿ ಎಂದು ಶುಭ ಹಾರೈಸಿದರು.

ಪರ್ಪುಂಜ ರಾಮಜಾಲು ಗರಡಿಯ ಅದ್ಯಕ್ಷ ಸಂಜೀವ ಕೂರೇಲು ಮಾತನಾಡಿ ಇದೊಂದು ದೊಡ್ಡ ಮಟ್ಟದ ಕಾರ್ಯವಾಗಿದೆ, ಅಶೋಕ್ ಕುಮಾರ್ ರೈಯವರ ಸಾಧನೆಯ ಫಲವಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಸ್ಧಾನ ನಿರ್ಮಾಣಗೊಂಡಿತ್ತು, ಮತ್ತೆ ಅದೇ ಅವರ ಕಾರ್ಯ ಸಾಧನೆ ನಿಡ್ಪಳ್ಳಿಯಲ್ಲಿ ಮುಂದವರಿದಿದೆ ಎಂದರು.

ನುಳಿಯಾಲು ತರವಾಡು ಮನೆಯ ಯಜಮಾನ ನಿವೃತ್ತ ಡಿವೈಎಸ್‌ಪಿ ಜಗನ್ನಾಥ ರೈ ಮಾದೋಡಿಯವರು ಮಾತನಾಡಿ 18 ವರ್ಷಗಳ ಕಾಲ ಕ್ಷೇತ್ರದಲ್ಲಿ ನಡೆದಿರುವ ಜೀರ್ಣೋದ್ಧಾರ ಕಾರ್ಯಗಳಲ್ಲಿ ನುಳಿಯಾಲು ಮನೆತನದವರ ಶ್ರಮವೂ ವಿನಿಯೋಗವಾಗಲು ಅವಕಾಶ ದೊರಕಿರುವುದು ಸಂತೋಷ ಎಂದರು.

ಮುಂದೆ ಮುಗೇರ ಶ್ರೀ ದುರ್ಗಾಪರಮೇಶ್ವರಿ ದೇವಸ್ಧಾನದ ಮೊಕ್ತೇಸರ ದಿವಾಕರ ರಾವ್ ಬ್ರಹ್ಮರಗುಂಡರವರು ಮಾತನಾಡಿ ನಮ್ಮೆಲ್ಲರ ಭಾಗ್ಯದ ಬಾಗಿಲು ತೆರೆದಿದೆ, ಜಗನ್ಮಾತೆ ಪ್ರತಿಷ್ಠಾಪನೆಗೊಂಡಿದ್ದಾಳೆ, ಜಗನ್ಮಾತೆ ನೆಲೆ ನಿಲ್ಲಬೇಕಾದರೆ ಕ್ಷೇತ್ರ ಎಷ್ಟು ಪವಿತ್ರ ಪಾವನವಾಗಿರಬೇಕೋ ಅದೇ ರೀತಿ ನಮ್ಮೆಲ್ಲರ ಮನಸ್ಸು ಕೂಡ ಶುದ್ಧವಾಗಿಬೇಕು ಎಂದರು.

ಈ ಶುಭ ಸಂದರ್ಭದಲ್ಲಿ ಅನೇಕ ಅತಿಥಿಗಳು ವೇದಿಕೆಯಲ್ಲಿ ಉಪಸ್ಧಿತರಿದ್ದರು. ಇನ್ನು ಇದೇ ಸಂದರ್ಭದಲ್ಲಿ ದೇಗುಲದ ಜೀರ್ಣೋದ್ಧಾರ ಕಾರ್ಯದಲ್ಲಿ ಮರಮಟ್ಟು ಹಾಗೂ ಧನಸಹಾಯ ರೂಪದಲ್ಲಿ ದೇಣಿಗೆ ನೀಡಿದವರನ್ನು ಗಣ್ಯರನ್ನು ಸನ್ಯಾನಿಸಿದರು. ಬಳಿಕ ಕುದ್ರೋಳಿ ಗಣೇಶ್ ಬಳಗದವರಿಂದ ‘ವಿಸ್ಮಯ ಲೋಕ’ ಜಾದೂ ಪ್ರದರ್ಶನ ನಡೆಯಿತು.