ಬೆಳ್ಳಾರೆ: ಸುಳ್ಯ ತಾಲೂಕಿನ ಪಲ್ಸ್ ಪೋಲಿಯೋ ಲಸಿಕಾ ಮೇಲ್ವಿಚಾರಕರೊಬ್ಬರು ತನ್ನ ಗೆಳೆಯನ ಮದುವೆಗೆ ಲಸಿಕೆಯ ಬಾಕ್ಸ್ನೊಂದಿಗೆ ಬಂದು ಮದುವೆ ಹಾಲ್‌ನಲ್ಲಿ 12 ಮಕ್ಕಳಿಗೆ ಲಸಿಕೆ ನೀಡಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಲಸಿಕೆಯಿಂದ ದೂರ ಉಳಿದ ಮಕ್ಕಳಿಗೆ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಲಸಿಕೆ ಹಾಕುತ್ತಿದ್ದಾರೆ.
ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಬೆಳ್ಳಾರೆ ಜೇಸಿಐ ಪೂರ್ವಾಧ್ಯಕ್ಷ ಜಗದೀಶ್ ಪಿ.ಎಲ್. ಅವರ ವಿವಾಹ ಸಮಾರಂಭಕ್ಕೆ ಬಂದ ಅವರ ಸ್ನೇಹಿತ, ಪಲ್ಸ್ ಪೋಲಿಯೊ ಲಸಿಕಾ ಮೇಲ್ವಿಚಾರಕ ಲೋಕೇಶ್ ತಂಟೆಪ್ಪಾಡಿ, ಲಸಿಕೆಯಿಂದ ದೂರ ಉಳಿದು ವಿವಾಹ ಸಮಾರಂಭದಲ್ಲಿದ್ದ ಮಕ್ಕಳಿಗೆ ಲಸಿಕೆ ನೀಡಿದ್ದಾರೆ.
ತಾ| ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ ಸಹಕರಿಸಿದರು. ತಾಲೂಕಿನಲ್ಲಿ ಒಂದೇ ದಿನದಲ್ಲಿ ಶೇ. 106 ರ ಲಸಿಕೆ ನೀಡುವ ಗುರಿ ಸಾಧಿಸಲಾಗಿದೆ.