ನಿಡ್ಪಳ್ಳಿ : ಶ್ರೀ ಶಾಂತದುರ್ಗ ದೇವಸ್ಥಾನ ಮತ್ತು ಶ್ರೀ ಕಿನ್ನಿ ಮಾಣಿ ಪೂಮಾಣಿ ಪರಿವಾರ ದೈವಸ್ಥಾನದ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವ ಕಾರ್ಯಕ್ರಮವು ಬಹಳ ಅದ್ದೂರಿಯಿಂದ ನಡೆಯುತ್ತಿದ್ದು. ೭ನೇ ದಿನದ ಧಾರ್ಮಿಕ ಸಭೆಯು ಡಾ ಪ್ರಭಾಕರ್ ಭಟ್ ಕಲ್ಲಡ್ಕ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ರೈ ಸೇರಿದಂತೆ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಿಡ್ಪಳ್ಳಿ ಕ್ಷೆÃತ್ರದ ಬ್ರಹ್ಮಕಶೋತ್ಸವದಲ್ಲಿ ಸಹಕರಿಸಿದ ಅನೇಕ ದಾನಿಗಳನ್ನು ಗೌರವಿಸಿ ಸನ್ಮಾನಿಲಾಯಿತ್ತು.
ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಕೀಲರು ಕೃಪಾ ಶಂಕರ್ ೧೫ದಿನಗಳ ಹಿಂದೆ ಕ್ಷೇತ್ರಕ್ಕೆ ಭೇಟಿ ನೀಡಿದ್ದೆ. ಆಸಮಯದಲ್ಲಿ ಕ್ಷೇತ್ರದ ಕೆಲಸಗಳು ಪೂರ್ಣ ಆಗಿರಲ್ಲಿಲ್ಲ ಇಲ್ಲಿನ ಎಲ್ಲಾರು ಯಾವ ರೀತಿಯಾಗಿ ಬ್ರಹ್ಮಕಲಶೋತ್ಸವ ನಡೆಸುವುದು ಎಂದು ಚಿಂತಿಸುತ್ತಿದರು. ಅದ್ರೆ ಇಲ್ಲಿನ ಶಾಂತದುರ್ಗಾ ದೇವಿಯ ಅಗೋಚರ ಶಕ್ತಿಯೋ ಏನೋ ಎಲ್ಲಾ ಕಾರ್ಯಗಳು ಸುಸುತ್ರವಾಗಿ ನಡೆದಿದೆ ಎಂದರು.
ಬಳಿಕ ನಿಡ್ಪಳಿಯ ಜನತೆಗೆ ಮಹಾನ್ ಪುಣ್ಯಚೇತನವಾಗಿ ಕಾಣುವ ಕೃಷ್ಣ ಶೆಟ್ಟಿಯವರು ಇಂದು ನೆನಪು ಮಾತ್ರ. ಬ್ರಹ್ಮಕಲಶೋತ್ಸವ ಸಂಭ್ರಮವೆಂಬ ತಾರಲೋಕದಲ್ಲಿ ದ್ರುವತಾರೆಯಾಗಿ ಕಂಗೊಳಿಸುತ್ತಿದ್ದಾರೆ. ಇವರ ಪರವಾಗಿ ಅವರ ಪತ್ನಿ ಯಮುನಾ ಬೋರ್‌ವೆಲ್ಸ್ ಮಾಲಕರು ದಿವ್ಯಾ ಕೆ ಶೆಟ್ಟಿ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ನನ್ನ ತಂದೆಗೆ ನಿಡ್ಪಳ್ಳಿಗೆ ಹೋಗುವುದಂದ್ರೆ ಅದೆನೊ ಖುಷಿ ಶಾಂತದುರ್ಗಾ ದೇವಿಯ ಜೀರ್ಣೊದ್ದಾರ ಸಮಿತಿಯಿಂದ ದೇವರ ಕಾರ್ಯವನ್ನು ಮಾಡುವ ಸಲುವಾಗಿ ಆಧ್ಯಕ್ಷ ಸ್ಥಾನವನ್ನು ವಹಿಸಲು ಕೇಳಿದಾಗ ಖೂಷಿಯಿಂದ ಒಪ್ಪಿಕೊಂಡರು. ಅವರು ಅಪಾರ ದೇವರ ಭಕ್ತಿ ಉಳ್ಳವರು. ಅವರು ದೇವರ ಸೇವೆಗೆ ಅದೆಷ್ಟು ಹಣ ನೀಡಿದ್ದಾರೆಂದು ನಮಗೆ ತಿಳಿದಿರಲ್ಲಿಲ್ಲ ಅದ್ರೆ ಅವರು ತೀರಿ ಹೋದ ನಂತರ ಅವರ ಅಕೌಂಟ್ ಚಕ್ಕ್ ಮಾಡಿದಾಗ ಸುಮಾರು ೨೪ ಲಕ್ಷಕ್ಕೂ ಅಧಿಕ ಹಣವನ್ನು ದೇವರ ಸೇವೆಗೆಂದು ಸಲ್ಲಿಸಿದ್ದಾರೆ. ಅದ್ರೆ ನನ್ನ ತಂದೆ ಕೃಷ್ಣ ಶೆಟ್ಟಿ ಇಂದು ಬ್ರಹ್ಮಕಲಶೋತ್ಸವ ಖುಷಿಯಾ ವಿಚಾರವನ್ನು ಹಂಚಿಕೊಳ್ಳಲು ಅವರು ನಮ್ಮ ಜೊತೆಗಿಲ್ಲ. ಎಂದು ದಿ. ಕೃಷ್ಣ ಶೆಟ್ಟಿ ಪುತ್ರಿ ಕಾವ್ಯ ಶೆಟ್ಟಿ ಹೇಳಿದರು.
ಬಳಿಕ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ ಪ್ರಭಾಕರ್ ಭಟ್ ಕಲ್ಲಡ್ಕ ವಿವೇಕಾನಂದರು ಹೇಳಿದಂತೆ ಪ್ರತಿಯೊಬ್ಬ ಮಾನವನಿಗೂ ಆತ್ಮವಿದ್ದಂತೆ ದೇಶಕ್ಕೂ ಆತ್ಮ ಇದೆ. ಭಾರತ ದೇಶದ ಆತ್ಮ ಧರ್ಮ ನಾವು ಧರ್ಮದ ಚಿಂತನೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಿದ್ಧೇವೆ. ಬೇರೆ ಬೇರೆ ಧರ್ಮದ ಜನರಿಗೆ ತನ್ನದೆ ರೀತಿಯಲ್ಲಿ ದೇವರನ್ನು ಆರಾಧನೆ ಮಾಡಲು ಅವಕಾಶ ಕಲ್ಪಿಸಿದ ದೇಶ ಭಾರತ. ನಮಗೆ ದೇಶ ಮತ್ತು ದೇವರು ಒಂದೇ. ದೇವರಿಲ್ಲದೆ ದೇಶವಿಲ್ಲ ಇದು ಹಿಂದೂ ಧರ್ಮದ ಸಂಪ್ರದಾಯ ಎಂದು ಹೇಳಿದರು.