Saturday, November 16, 2024
ಸುದ್ದಿ

ಮಿನಿ ವಿಧಾನಸೌದ ಮುಂದೆ ವಿದ್ಯಾರ್ಥಿನಿ ಶವ ಇಟ್ಟು ಸಾರ್ವಜನಿಕರಿಂದ ಪ್ರತಿಭಟನೆ | ನ್ಯಾಯಕ್ಕಾಗಿ ಆಗ್ರಹ.

ಪುತ್ತೂರು : ತಾಲೂಕಿನ ಕಬಕ ವಿಧ್ಯಾಪುರದ ನಿವಾಸಿ, ವಿವೇಕಾನಂದ ಕಾಲೇಜು ವಿದ್ಯಾರ್ಥಿ ಪೂಜಾ ಆಚಾರ್ಯ, ಖಾಸಗಿ ವೈದ್ಯರ ಮುಷ್ಕರಕ್ಕೆ ಬಲಿಯಾದ ನತದೃಷ್ಟೆ. ಇಂದು ಬೆಳಿಗ್ಗೆ ಸಮರ್ಪಕ ಚಿಕಿತ್ಸೆ ದೊರೆಯದೆ ಆಕೆ ಸರ್ಕಾರಿ ಆಸ್ಫತ್ರೆಯಲ್ಲಿ ಮೃತರಾದರು. ಎರಡೂ  ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಈಕೆ ಕಳೆದ ಬುಧವಾರ ತೀವ್ರವಾಗಿ ಅಸ್ವಸ್ಥತೆಗೆ ಒಳಗಾಗಿದ್ದು ,ಚಿಕಿತ್ಸೆಗಾಗಿ ಮಂಗಳೂರು  ಹಾಗೂ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಎಡತಾಕಿದ್ದು ,ಅಲ್ಲಿ ಮುಷ್ಕರದ ನೆಪದಿಂದ ಸೂಕ್ತ ಚಿಕಿತ್ಸೆ ದೊರಕಲಿಲ್ಲ. ಎರಡು ದಿನಗಳ ಹಿಂದೆ ಈಕೆ ಡಯಾಲಿಸೀಸ್ ಗಾಗಿ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ತೆರಳಿದ ಹಿನ್ನಲೆಯಲ್ಲಿ ವೈದ್ಯರ ತಪಾಸಣೆಯ ಬಳಿಕ ಡಯಾಲಿಸೀಸ್ ನಡೆಸುವಂತೆ ವೈದ್ಯರು ತಿಳಿಸಿದ್ದರು. ಆದರೆ ವೈದ್ಯರ ಮುಷ್ಕರದ ಹಿನ್ನಲೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದ ಕಾರಣ ಪೂಜಾ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಈ ನಡುವೆ ಗುರುವಾರ ಪೂಜಾಳನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಆಕೆ ಕೊನೆಯುಸಿರೆಳೆದಿದ್ದಳು.

 

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಆರು ತಿಂಗಳ ಹಿಂದೆಯಷ್ಟೇ ಮನೆಯ ಆಧಾರಸ್ತಂಭವಾಗಿದ್ದ ತಂದೆಯೂ ಮೃತರಾಗಿದ್ದರು. ಗುಡಿಸಿಲಿನಂತಹ ಮನೆಯನ್ನು ಹೊಂದಿರುವ ಅವರದು ಅತ್ಯಂತ ಕಡು ಬಡತನದ ಕುಟುಂಬ. ಮೃತೆಯು ಸೇರಿದಂತೆ ಮೂವರು ಹೆಣ್ಣುಮಕ್ಕಳು.ಮೂವರು ರ್ಯಾಂಕ್ ಪಡೆಯುತ್ತಿರುವ ಪ್ರತಿಭಾನ್ವಿತ ವಿಧ್ಯಾರ್ಥಿಗಳು .ಈಕೆಯ ಸಾವು ಆ ಬಡ ಕುಟುಂಬಕ್ಕೆ ಬರ ಸಿಡಿಲಿನಂತೆ ಬಂದೊದಿಗಿದೆ.

 

ಈ ಹಿನ್ನಲೆಯಲ್ಲಿ ಆಕೆಯ ಕಬಕದ ವಿದ್ಯಾಪುರದ ಮನೆಯಲ್ಲಿ ಶೋಕ ಮಡುಗಟ್ಟಿದೆ. ನೂರಾರು ಸಂಖ್ಯೆಯಲ್ಲಿ ಜನ ಪೂಜಾಳ ಮನೆಯಲ್ಲಿ ಜಮಾಯಿಸುತ್ತಿದ್ದರೂ, ಸ್ಥಳೀಯ ರೆವೆನ್ಯೂ ಅಧಿಕಾರಿಗಳ ಮಾತ್ರ ಈಕೆಯ ಮನೆಯ ಹತ್ತಿರ ಸುಳಿದಾಡಿಲ್ಲ.ಸಹಾಯಕ ಆಯುಕ್ತರು, ತಹಸಿಲ್ದಾರ್ , ಜಿಲ್ಲಾಧಿಕಾರಿಗಳು ಮೃತರ ಮನೆಗೆ ಭೇಟಿ ನೀಡಿ ಪರಿಹಾರದ ಅಶ್ವಾಸನೆ  ನೀಡಬೇಕು ಎಂಬ ಒತ್ತಾಯ ಅಲ್ಲಿ ನೆರೆದಿರುವ ಸಾರ್ವಜನಿಕರದು. ಸರಕಾರದ ನಿರ್ಲಕ್ಷ್ಯದಿಂದಲೇ ಈ ಸಾವು ಸಂಭವಿಸಿದೆ ಎನ್ನುವ ಆರೋಪ ಕುಟುಂಬ ಸದಸ್ಯರದ್ದಾಗಿದ್ದು, ಸರಕಾರವೇ ಈ ಕುಟುಂಬಕ್ಕೆ ಪರಿಹಾರ ನೀಡಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ. ಅಧಿಕಾರಿಗಳು ಕೂಡಲೇ ಪೂಜಾಳ ಮನೆಗೆ ತೆರಳಿ ಆಕೆಯ ಸಾವು ವೈದ್ಯರ ಮುಷ್ಕರದ ಕಾರಣದಿಂದಲೇ ಸಂಭವಿಸಿದೆ ಎನ್ನುವ ವರದಿಯನ್ನು ಸರಕಾರಕ್ಕೆ ಸಲ್ಲಿಸಬೇಕು.ಇಲ್ಲದೇ ಹೋದಲ್ಲಿ ಪೂಜಾಳ ಶವವನ್ನು ಪುತ್ತೂರು ಮಿನಿ ವಿಧಾನಸೌಧದ ಮುಂದೆ ಇಟ್ಟು ಪ್ರತಿಭಟನೆ ನಡೆಸುವ ಚಿಂತನೆ ನಡೆಸಿದ್ದಾರೆ. ಆದರೆ ಸಂಜೆಯಾದರೂ ಮೃತಳ ಮನೆಗೆ ಅಧಿಕಾರಿಗಳು ಭೇಟಿ ನೀಡದೆ ಇರುವುದರಿಂದ  ಇದೀಗ ಕುಟುಂಬಸ್ಥರು ಪುತ್ತೂರಿನ ಮಿನಿ ವಿಧಾನ ಸೌಧದ ಬಳಿ ಪ್ರತಿಭಟನೆಗೆ ಮುಂದಾಗಿದ್ದಾರೆ.

Leave a Response