ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದ ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಖಾನಗೌಡ್ರ ಶಾಲೆಯಲ್ಲಿ ಶಿಕ್ಷಕ ಶಿವು ಯಾದವಾಡ ತಯಾರಿಸಿದ ಶಾಲಾ ATM ಹಾಗೂ ಮಕ್ಕಳ ವೇದಿಕೆ ಕಾರ್ಯಕ್ರಮ.
ಮಕ್ಕಳ ಮನಸ್ಸು ಅರಿತು, ಸಂತಸದಾಯಕ ಕಲಿಕೆಗೆ ಅವಶ್ಯಕ ಚಟುವಟಿಕೆಗಳನ್ನು ಸಿದ್ದಪಡಿಸಿಕೊಂಡು ಶಿಕ್ಷಕರು ಪಾಠ ಮಾಡಿದಾಗ ಆ ಬೋಧನೆ ಸಾರ್ಥಕವೆನಿಸುವುದು.
ಖಾನಗೌಡ್ರ ತೋಟದ ಶಾಲೆಯಲ್ಲಿ ಶಿವು ಯಾದವಾಡ ಶಿಕ್ಷಕರು ಶಾಲೆ ATM ತಯಾರಿಸಿ ಬೋಧನೆಯನ್ನು ಕೈಗೊಂಡರು.
ಈ ರೀತಿ ಪಾಠ ಬೋಧನೆ ಮಾಡಿದರೆ ಕಲಿಕೆಯು ಪರಿಣಾಮಕಾರಿಯಾಗಿ ನೆರವೇರುವುದು ಎಂದು ಎಲ್ಲ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮದ ಜನರಿಗೆ ಹಾಗೂ ಗ್ರಾಮದ ಎಲ್ಲಾ ಶಾಲಾ ಮಕ್ಕಳಿಗೆ ATM ಕುರಿತು ಮಾಹಿತಿ ನೀಡಲು ಹಾಗೂ ಅದನ್ನು ಬಳಸುವ ಕ್ರಮವನ್ನು ಪ್ರಾಯೋಗಿಕವಾಗಿ ತಿಳಿಸಿದರು.
ಮುಖ್ಯ ಗುರುಗಳಾದ ಶ್ರೀ ಗಂಜ್ಯಾಳ ಗುರುಗಳು ಪ್ರಾಸ್ತಾವಿಕವಾಗಿ ಮಾತನಾಡಿ ಇದೇ ರೀತಿ ಸರಕಾರಿ ಶಾಲೆಗಳು ಸೃಜನಾತ್ಮಕವಾಗಿ ಪಾಠ ಬೋಧನೆ ಮಾಡಿದರೆ ಸರಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹಾಗೂ ಗುಣಾತ್ಮಕ ಶಿಕ್ಷಣ ಹೆಚ್ಚುವುದು ಎಂದು ಹೇಳಿದರು.
ಈ ಸಮಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಬಾಗೆನ್ನವರ, ಕ್ಷೇತ್ರ ಸಮನ್ವಯಾಧಿಕಾರಿ ವಿಜಯಕುಮಾರ್ ವಂದಾಲ, ಶ್ರೀ ಎಸ್.ಪಿ.ಹೂಗಾರ, ಸಿ.ಪಿ.ಕಡಕೋಳ, ಪಿ.ಬಿ.ಅಜ್ಜನವರ, ಎ.ಜಿ.ಕಾಖಂಡಕಿ, SDMC ಅಧ್ಯಕ್ಷರಾದ ಎಸ್.ಎಸ್.ಖಾನಗೌಡ್ರ ಹಾಗೂ ಸದಸ್ಯರು, BRP, CRP ಹಾಗೂ ನಾನಾ ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.