Saturday, November 30, 2024
ಸುದ್ದಿ

ಕಾಂಗ್ರೇಸ್ ಅಧಿಕಾರಕ್ಕೆ ಬಂದ್ರೆ ರಾಗಾ ಹೋಸ ಸ್ಕೀಂ – ಕಹಳೆ ನ್ಯೂಸ್

ಛತ್ತೀಸ್‍ಗಢದ ರಾಯಪುರದಲ್ಲಿ ನಡೆದ ಆರೋಗ್ಯ ಅಧಿಕಾರಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೇಸ್ ಅಧ್ಯಕ್ಷ ರಾಹುಲ್ ಗಾಂದಿ, ಆಯುಷ್ಮಾನ್ ಭಾರತ 15-20 ಸಿರಿವಂತ ಉದ್ಯಮಿಗಳ ಕರಪತ್ರದಂತಿದೆ. ಈ ತರಹದ ಯೋಜನೆಗಳನ್ನು ನಾವು ಮುನ್ನಡೆಸುವುದಿಲ್ಲ ಎಂದು ಕುಟುಕಿದರು.

ಆಸ್ಪತ್ರೆಗಳಿಗೆ ಹಾಗೂ ವೈದ್ಯಕೀಯ ಸಿಬ್ಬಂದಿಯಿಂದ ಯಾವುದೇ ಸಮರ್ಪಕ ಬೆಂಬಲವಿಲ್ಲದ ವಿಮೆ ಪದ್ದತಿ ಆಯುಷ್ಮಾನ್ ಭಾರತ್ ಆಗಿದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಗ್ಯ ಸೇವೆ ಎಂಬುದು ಬುನಾದಿಯಿದ್ದಂತೆ. ಅದನ್ನು ಸದೃಢವಾಗಿ ನಿರ್ಮಿಸಬೇಕು. ಕಾಂಗ್ರೆಸ್ ಸರ್ಕಾರ 2019ರಲ್ಲಿ ಆರೋಗ್ಯ ಸೇವೆಗೆ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡಲಿದೆ. ಜಿಡಿಪಿಯ ಶೇ 3ರಷ್ಟು ವೆಚ್ಚವನ್ನು ಹೆಚ್ಚಿಸಲಿದ್ದೇವೆ ಎಂದ ಅವರು, ಲೋಕಸಭೆ ಚುನಾವಣೆಯಲ್ಲಿ ನಾವೇ ಗೆದ್ದುಬರುತ್ತೇವೆ ಎಂಬ ವಿಶ್ವಾಸದಿಂದ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಗ್ಯ ಸಿಬ್ಬಂದಿಯೇ ಆರೋಗ್ಯ ವಲಯದ ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ವೈದ್ಯಕೀಯ ಸೌಲಭ್ಯಗಳು, ವ್ಯವಸ್ಥೆ ಹಾಗೂ ವಿಮೆ ಕುರಿತಾಗಿ ಜನರು ನೀಡುವ ಸಲಹೆಗಳನ್ನೇ ನಾವು ಆದ್ಯತೆಯಾಗಿ ಸ್ವೀಕರಿಸುತ್ತೇವೆ ಎಂದರು.

ಕಾಯ್ದೆ ರೂಪದಲ್ಲಿ ಆರೋಗ್ಯಸೇವೆ ಹಕ್ಕನ್ನು ಒದಗಿಸುವುದದು ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿದೆ. ಭಾರತೀಯರಿಗೆಲ್ಲ ಕನಿಷ್ಠ ಆರೋಗ್ಯ ಸೇವೆ ಒದಗಿಸುವ ಗ್ಯಾರಂಟಿ ನೀಡುತ್ತೇವೆ. ವೈದ್ಯಕೀಯ ಸಿಬ್ಬಂದಿ ಸಂಖ್ಯೆಯನ್ನೂ ಹೆಚ್ಚಿಸುತ್ತೇವೆ ಎಂದು ಭರಸವಸೆ ನೀಡಿದರು.