Saturday, November 30, 2024
ಸುದ್ದಿ

ಚಿನ್ನದ ಮನೆಯಲ್ಲಿ ಕಂಗೊಳಿಸಲಿದ್ದಾನೆ ಶ್ರೀ ಕೃಷ್ಣ – ಕಹಳೆ ನ್ಯೂಸ್

ಲೋಕಪ್ರಸಿದ್ಧ ಉಡುಪಿಯ ಕೃಷ್ಣ ದೇವಾಲಯದಲ್ಲಿ ಇನ್ನು ಶ್ರೀ ಕೃಷ್ಣ ಚಿನ್ನದ ಮನೆಯಲ್ಲಿ ಕಂಗೊಳಿಸಲಿದ್ದಾನೆ. ಚಿನ್ನದ ಅರಮನೆಯಲ್ಲಿ ಕುಳಿತು ಲೋಕದ ಜನತೆಯ ಸಲುಹಲಿದ್ದಾನೆ, ಹೌದು, ಎಂಟು ಶತಮಾನದ ಇತಿಹಾಸ ಇರುವ ಕೃಷ್ಣ ದೇವರ ಗರ್ಭಗುಡಿಗೆ ಚಿನ್ನದ ಮೇಲ್ಛಾವಣೆ ಹೊದಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ.

ದೇಶದ ಪ್ರಸಿದ್ದ ಧಾರ್ಮಿಕ ಕೇಂದ್ರವಾದ ಉಡುಪಿಯ ಕೃಷ್ಣಮಠದಲ್ಲಿ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು. ಪರ್ಯಾಯ ಪಲಿಮಾರು ಮಠಾಧೀಶರ ಸಂಕಲ್ಪದಂತೆ, ಕೃಷ್ಣ ದೇವರ ಗರ್ಭಗುಡಿಗೆ ನೂರು ಕೆಜಿ ತೂಕದ ಚಿನ್ನದ ಮೇಲ್ಛಾವಣಿ ಹೊದಿಸಲಾಗುತ್ತಿದೆ. 800 ವರ್ಷಗಳ ಇತಿಹಾಸ ಇರುವ ಗರ್ಭಗುಡಿಯ ಹಳೇಯ ಮೇಲ್ಛಾವಣಿಯನ್ನು ಗುರುವಾರ ಕೆಳಗಿಳಿಸಲಾಯ್ತು. ಸಂಪ್ರದಾಯದಂತೆ ಹೋರಿಯ ಮೂಲಕ ಚಿನ್ನದ ಕಳಶಗಳನ್ನು ಕೀಳಲಾಯ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿವಿಧ ಹೋಮ ಹವನಗಳ ಮೂಲಕ ಪೂಜಿಸಿ, ದೇವರ ಅನುಮತಿ ಪಡೆಯುವ ವಿಶಿಷ್ಟ ಧಾರ್ಮಿಕ ಕಾರ್ಯಕ್ರಮ ಕೃಷ್ಣಮಠದಲ್ಲಿ ನಡೆಯಿತು. ಮುಷ್ಟಿಕಾಣಿಕೆಯನ್ನು ಅರ್ಪಿಸುವ ಮೂಲಕ ಈ ದೇವಕಾರ್ಯದಲ್ಲಿ ಸಾರ್ವಜನಿಕರು ಭಾಗಿಯಾದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಊರಿನ ದೇವಸ್ಥಾನದ ಗರ್ಭಗುಡಿಯನ್ನು ಕಿತ್ತಾಗ, ಊರಿಗೆ ಸಂಕಟವಾಗಬಾರದು ಅನ್ನೋ ಕಾರಣಕ್ಕೆ ವಿವಿಧ ಪ್ರಾಯಶ್ಚಿತ್ತ ಹೋಮ ನಡೆದವು. ಕೃಷ್ಣಮಂತ್ರ, ವಿಷ್ಣುಗಾಯತ್ರಿ ಮಂತ್ರ ಪಠಿಸಲಾಯಿತು. ವಾಸ್ತುಪೂಜೆ, ಗಣಪತಿ ಹೋಮ, ಚಂಡಿಕಾಹೋಮ ಹಾಗೂ ದೇವರ ಗರ್ಭಗುಡಿ ಕಿತ್ತ ಕಾಲದಲ್ಲಿ ಊರಿನಲ್ಲಿ ಯಾವುದೇ ಸಾವು ನೋವು ಸಂಭವಿಸಬಾರದು ಅನ್ನೋ ಕಾರಣಕ್ಕೆ ಮೃತ್ಯಂಜಯ ಹೋಮವನ್ನೂ ನಡೆಸಲಾಯಿತು.

ಇನ್ನು ದೇವಸ್ಥಾನದ ಗರ್ಭಗುಡಿಯ ಮೇಲ್ಛಾವಣಿ ಕಿತ್ತಾಗ ಊರ ಜನರಿಗೆ ಸಂಕಷ್ಟವಾಗಬಾರದು ಎಂಬ ಕಾರಣಕ್ಕೆ ಪೂಜೆ, ಧ್ಯಾನದಲ್ಲಿ ತೊಡಗುವಂತೆ ಸೂಚಿಸಲಾಗುತ್ತೆ. ಆದ್ರೆ ಬದಲಾದ ಕಾಲಘಟ್ಟದಲ್ಲಿ ನಿರಂತರ ಧಾರ್ಮಿಕ ಕಾರ್ಯ ನಡೆಸೋದು ಕಷ್ಟವಾದ ಕಾರಣ, ದೋಷ ಪರಿಹಾರಾರ್ಥ ಮುಷ್ಟಿ ಕಾಣಿಕೆಯನ್ನು ಅರ್ಪಿಸಲು ಅನುಕೂಲ ಕಲ್ಪಿಸಲಾಗಿದೆ. ಬ್ರಹ್ಮ ಕಲಶೋತ್ಸವದವರೆಗೂ ಇಲ್ಲಿ ಕಾಣಿಕೆ ಅರ್ಪಿಸಿ, ಈ ಮಹತ್ಕಾರ್ಯದಲ್ಲಿ ಕೈ ಜೋಡಿಸಲು ಅವಕಾಶವಿದೆ.

ಇದು 40 ಕೋಟಿ ವೆಚ್ಚದ ಕಾಮಗಾರಿ. ದೇಶದ ಪ್ರಸಿದ್ದ ಕ್ಷೇತ್ರದಲ್ಲಿ ಕೈಗೊಂಡ ಈ ಮಹತ್ಕಾರ್ಯಕ್ಕೆ ಈಗಾಗಲೇ ಶೇ.70ರಷ್ಟು ಧನಸಂಗ್ರಹವಾಗಿದೆ. ಮುಂದಿನ ಎರಡುವರೆ ತಿಂಗಳಲ್ಲಿ 100 ಕೆಜಿ ಚಿನ್ನದ ಮಾಡು ಕೃಷ್ಣ ದೇವರ ಎರಡಂತಸ್ತಿನ ಮೇಲ್ಚಾವಣಿಯನ್ನು ಅಲಂಕರಿಸಲಿದೆ. ಈ ಮೂಲಕ ಕೃಷ್ಣಮಠ ಮತ್ತಷ್ಟು ಜನಾಕರ್ಷಣೆಗೆ ಪಾತ್ರವಾಗಲಿದೆ.