Recent Posts

Saturday, November 16, 2024
ಸುದ್ದಿ

ವಿದ್ಯಾರ್ಥಿನಿ ಸಾವಿಗೆ ಸರಕಾರವೇ ಕಾರಣ | ತುಟಿಬಿಚ್ಚದ ಶಾಸಕಿ ಶಕುಂತಲಾ ಶೆಟ್ಟಿಗೆ ಛೀಮಾರಿ !

ಪುತ್ತೂರು : ಕಬಕದ ವಿದ್ಯಾಪುರ ನಿವಾಸಿ ಪುತ್ತೂರು ವಿವೇಕಾನಂದ ಕಾಲೇಜಿನ ದ್ವಿತೀಯ ಬಿ.ಕಾಂ.ವಿದ್ಯಾರ್ಥಿನಿ ಪೂಜಾ ಕಿಡ್ನಿ ವೈಪಲ್ಯದಿಂದ ಬಳಲುತಿದ್ದು ಏಕಾಏಕಿ ನಿನ್ನೆ ಬೆಳಗ್ಗೆ ರೋಗ ಉಲ್ಬಣಗೊಂಡು ಸಾವನ್ನಪ್ಪಿದ್ದಾಳೆ.

ಹಿನ್ನಲೆ : ಪೂಜಾ ಈಗಾಗಲೇ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ವಾರಕ್ಕೆ 2 ಬಾರಿ ಡಯಲಿಸೀಸಸ್ ಮಾಡಲಾಗುತಿತ್ತು, ಆದರೆ, ವೈದ್ಯರ ಮುಷ್ಕರದಿಂದಾಗಿ ಡಯಲಿಸಸ್ ನೀಡಲಾಗಿಲ್ಲ. ಪೂಜಾಳನ್ನು ಎಂದಿನಂತೆ ಪುತ್ತೂರು ಸಿಟಿ ಅಸ್ಪತ್ರೆಗೆ ಕರಕೊಂಡು ಹೋದಾಗ ಅಲ್ಲಿ ವೈದ್ಯರಿಲ್ಲದೆ ಚಿಕಿತ್ಸೆ ನೀಡಲಾಗಲಿಲ್ಲ. ಇದರ ಪರಿಣಾಮ ವಿದ್ಯಾರ್ಥಿನಿ ಅಸುನೀಗಿದ್ದಾಳೆ. ನಂತರ ಕುಟುಂಬಸ್ಥರು ವಿದ್ಯಾರ್ಥಿನಿ ಶವವನ್ನು ಪುತ್ತೂರಿನ ಮಿನಿ ವಿಧಾನಸೌಧದ ಮುಂಭಾಗಲಿನಲ್ಲಿಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಇಷ್ಟೆಲ್ಲಾ ನಡೆಯುತ್ತಿದ್ದರೂ ಪುತ್ತೂರಿನ ಶಾಸಕಿ ಶಕುಂತಳಾ ಶೆಟ್ಟಿ ದಿವ್ಯ ಮೌನಕ್ಕೆ ಜಾರಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಸಕಿ ನಡೆ ಖಂಡನೀಯ, ಗ್ರಾಮಸ್ಥರಿಂದ ಹೋರಾಟದ ಎಚ್ಚರಿಕೆ :

ವಿದ್ಯಾರ್ಥಿನಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ವಿದ್ಯಾರ್ಥಿನಿ ಮನೆಗಾಗಮಿಸಿದ ಗ್ರಾಮಸ್ಥರು, ವಿದ್ಯಾರ್ಥಿನಿ ಸಾವಿಗೆ ಸರಕಾರದ ಹಗಲು ಕುರುಡೇ ಕಾರಣ ಎಂದು ಆರೋಪಿಸಿದ್ದಾರೆ. ವಿದ್ಯಾರ್ಥಿನಿಯ ಕುಟುಂಬಸ್ಥರು ತೀರಾ ಕಡು ಬಡವರಾಗಿದ್ದು, ಕೂಲಿ ಕೆಲಸವೇ ಜೀವನಕ್ಕೆ ದಾರಿಯಾಗಿತ್ತು, ಆದರೆ, ಇಂದು ವಿದ್ಯಾರ್ಥಿನಿಯನ್ನೂ ಕಳೆದುಕೊಂಡು ತಾಯಿ ಮತ್ತು ತಂಗಿ ಜೀವನಕ್ಕೆ ದಾರಿಕಾಣದೆ ಪರಿತಪಿಸುತ್ತಿದ್ದಾರೆ. ಈ ಸಾವಿಗೆ ಸರಕಾರದ ನಡೆಗಳೇ ಕಾರಣ, ಒಬ್ಬರು ಮಹಿಳಾ ಶಾಸಕಿಯವರು ಪುತ್ತೂರಿಗೆ ಲಭಿಸಿದ್ದರೂ ಕೂಡ, ಅವರು ಮಹಿಳೆಯ ಸಮಸ್ಯೆಗೆ ಸ್ಪಂದಸದೇ ಇರುವುದು ಅವರ ಅಹಂಕಾರದ ಪರಮಾವಧಿ. ಇಂತಹ ಶಾಸಕಿ ಪುತ್ತೂರಿಗೆ ಕಳಂಕ ಈ ಸಾವಿಗೆ ಸೂಕ್ತ ನ್ಯಾಯ ದೊರಕಿಸಿ, ಪರಿಹಾರ ದೊರಕುಸಿಕೊಡಬೇಕು ಒಂದು ವೇಳೆ ಸೂಕ್ತ ಪರಿಹಾರ ದೊರಕದಿದ್ದರೆ, ಉಗ್ರಹೋರಾಟ ನಡೆಸೂದಾಗಿ ಎಚ್ಚರಿಕೆ ನೀಡಿದ್ದಾರೆ.

Leave a Response