Sunday, January 19, 2025
ಸುದ್ದಿ

ರಾಘವೇಶ್ವರಭಾರತೀ ಶ್ರೀ ಮಾರ್ಗದರ್ಶನದ ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೆ ಉನ್ನತೀಕರಿಸಿದ ಐ.ಎಸ್.ಒ. | ಭಕ್ತರ ಸಂತಸ ನೂರ್ಮಡಿ

ಗೋಕರ್ಣ: ಶಿಸ್ತಿಗೆ ಹೆಸರಾಗಿರುವ ಶ್ರೀರಾಮಚಂದ್ರಾಪುರ ಮಠದ ಆಡಳಿತಕ್ಕೊಳಪಟ್ಟಿರುವ ಗೋಕರ್ಣದ ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿನ ಸುವ್ಯವಸ್ಥಿತ ಆಡಳಿತ ಹಾಗೂ ಸಮರ್ಥ ನಿರ್ವಹಣೆಯನ್ನು ಪ್ರಮಾಣೀಕರಿಸುವ ISO ಪ್ರಮಾಣಪತ್ರ ಲಭಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಾರ್ವಭೌಮ ಮಹಾಬಲೇಶ್ವರ ದೇವಾಲಯದ ದಕ್ಷ ಆಡಳಿತ ವ್ಯವಸ್ಥೆಯನ್ನು ಪ್ರಮಾಣೀಕರಿಸುವ ISO 9001:2008 ಕಳೆದ ವರ್ಷ ದೊರಕಿದ್ದು, ದೇವಹಿತ – ಭಕ್ತಹಿತ – ಸೇವಕಹಿತ ಎಂಬ ಮೂರಂಶದ ಆಧಾರದಲ್ಲಿ ಪಾರದರ್ಶಕ ಆಡಳಿತ ಹಾಗೂ ಸಮರ್ಥ ನಿರ್ವಹಣೆಯನ್ನು ಕಾಯ್ದಿರಿಸಿಕೊಂಡಿರುವುದರಿಂದ ಇದೀಗ ಉನ್ನತೀಕರಿಸಿದ ISO 9001:2015 ಪ್ರಮಾಣಪತ್ರ ದೇವಾಲಯದ ಆಡಳಿತಕ್ಕೆ ದೊರೆತಿದೆ.
ದೇವಸ್ಥಾನದಲ್ಲಿ ಮೂರಂಶದ ಗುಣಮಟ್ಟದ ನೀತಿ ದೇವಹಿತ- ಪಾರಂಪರಿಕವಾಗಿ ನಡೆದುಕೊಂಡು ಬಂದ ಸಂಪ್ರದಾಯಬದ್ಧ ಧಾರ್ಮಿಕ ಆಚರಣೆ, ಶ್ರೀಮಹಾಬಲೇಶ್ವರ ದೇವರ ಪೂಜಾಕೈಂಕರ್ಯವನ್ನು ಸಮರ್ಪಕ ರೀತಿಯಲ್ಲಿ ಮುಂದುವರಿಸುವುದು.
ಭಕ್ತಹಿತ – ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅಧ್ಯಾತ್ಮಿಕವಾಗಿ ಹಾಗೂ ಹಾಗೂ ಇತರೆ ಮೂಲಸೌಕರ್ಯಗಳನ್ನು, ಅನುಕೂಲಗಳನ್ನು ಕಲ್ಪಿಸುವ ಮೂಲಕ ಗರಿಷ್ಠಮಟ್ಟದ ಸಂತೃಪ್ತಿಯನ್ನು ಒದಗಿಸುವುದು.
ಸೇವಕಹಿತ – ಗೋಕರ್ಣ ದೇವಸ್ಥಾನದ ಆಡಳಿತ ಸಿಬ್ಬಂದಿ ಹಾಗೂ ಉಪಾಧಿವಂತರ ಸಹಕಾರದೊಂದಿಗೆ ದೇವರ ಸೇವೆಯನ್ನು ಮಾಡುವವರಿಗೆ ಗುಣಮಟ್ಟದ ಬದುಕು ಸಾಧಿಸುವಲ್ಲಿ ಎಲ್ಲ ರೀತಿಯ ಸೇವಾ ಸೌಕರ್ಯಗಳನ್ನು ಒದಗಿಸುವುದು.
ISO 9001:2008 ಪ್ರಮಾಣಪತ್ರ
ಕಳೆದ ವರ್ಷ ISO 9001:2008 ಪ್ರಮಾಣಪತ್ರ
ಶ್ರೀಮಹಾಬಲೇಶ್ವರ ದೇವಾಲಯದ ಆಡಳಿತ ನಿರ್ವಹಣೆ, ಪೂಜಾ ವ್ಯವಸ್ಥೆ, ಸ್ವಚ್ಛತೆ, ಸುರಕ್ಷೆ, ದೇವರ ದರ್ಶನ ವ್ಯವಸ್ಥೆ, ವಿಪತ್ತು ನಿರ್ವಹಣೆ ಹಾಗೂ ಅಮೃತಾನ್ನ ಪ್ರಸಾದ ಭೋಜನ ವ್ಯವಸ್ಥೆಯನ್ನು ಕಂಡು ಕಳೆದ ವರ್ಷ ISO 9001:2008 ಪ್ರಮಾಣಪತ್ರ ಲಭಿಸಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಮಾಣ ಪತ್ರ ಸಿಕ್ಕಿದ್ದು ಹೀಗೆ
ಈ ವರ್ಷ ISO 9001:2015 ಪ್ರಮಾಣಪತ್ರ :

ಸಾರ್ವಭೌಮ ಶ್ರೀಮಹಾಬಲೇಶ್ವರ ದೇವಾಲಯದ ಆಡಳಿತ ನಿರ್ವಹಣೆ, ಪೂಜಾ ವ್ಯವಸ್ಥೆ, ಸ್ವಚ್ಛತೆ, ಸುರಕ್ಷೆ, ದೇವರ ದರ್ಶನ ವ್ಯವಸ್ಥೆ, ವಿಪತ್ತು ನಿರ್ವಹಣೆ ಹಾಗೂ ಅಮೃತಾನ್ನ ಪ್ರಸಾದ ಭೋಜನ ವ್ಯವಸ್ಥೆಗಳನ್ನು ಸಮಗ್ರವಾಗಿ ಅಧ್ಯಾಯನ ಮಾಡಿ, ತಜ್ಞರ ಪರಿಶೋಧನೆಗೆ ಒಳಪಡಿಸಲಾಗಿದೆ. ಎಲ್ಲ ವ್ಯವಸ್ಥೆಗಳು ಮತ್ತು ಆಡಳಿತ ನಿರ್ವಹಣೆಯು, ISO 9001:2008 ಅರ್ಹತಾ ನಿಯಮಗಳಿಗೆ ಅನುಗುಣವಾಗಿರುವುದು ಖಾತರಿಯಾದ ಬಳಿಕ ಕಳೆದ ವರ್ಷ ಶ್ರೀಮಹಾಬಲೇಶ್ವರ ದೇವಾಲಯಕ್ಕೆ ಐ.ಎಸ್.ಓ ಪ್ರಮಾಣಪತ್ರ ನೀಡಲಾಗಿತ್ತು. ಆ ಮಾನದಂಡಗಳನ್ನು ಕಾಯ್ದಿರಿಸಿಕೊಂಡಿರುವುದರಿಂದ ಇದೀಗ ಉನ್ನತೀಕರಿಸಿದ ISO 9001:2015 ಪ್ರಮಾಣಪತ್ರ ದೇವಾಲಯದ ಆಡಳಿತಕ್ಕೆ ಲಭ್ಯವಾಗಿದೆ. ಇದು ಶ್ರೀಮಠದ ಸುವ್ಯವಸ್ಥಿತ ಆಡಳಿತಕ್ಕೆ ಕೈಗನ್ನಡಿ ಹಾಗೂ ಪಾರದರ್ಶಕ ನಿರ್ವಹಣೆಗೆ ಸಾಕ್ಷಿಯಾಗಿದೆ.

ಪರಿಪೂರ್ಣ ನಿರ್ವಹಣೆ ಹಾಗೂ ಸ್ವಚ್ಛತೆಗೆ ಆದ್ಯತೆ
ಉತ್ತಮ ಆಡಳಿತದ ಸ್ಥಿರೀಕರಣ:

ಪ್ರಾಚೀನ ಕಾಲದಿಂದಲೂ ಶ್ರೀರಾಮಚಂದ್ರಾಪುರಮಠದ ಆಡಳಿತದಲ್ಲಿದ್ದ ಶ್ರೀಮಹಾಬಲೇಶ್ವರ ದೇವಾಲಯವನ್ನು 2008ರಲ್ಲಿ ಘನಸರ್ಕಾರವು ಶ್ರೀಮಠಕ್ಕೆ ಮರುಹಸ್ತಾಂತರಿಸುವ ಮೂಲಕ ದೇವಾಲಯದಲ್ಲಿ ಅಭಿವೃದ್ಧಿಯ ಮಹಾಪರ್ವಕ್ಕೆ ಹಾಗೂ ಗೋಕರ್ಣದ ಸರ್ವತೋಮುಖ ಅಭಿವೃದ್ಧಿಗೆ ನಾಂದಿಹಾಡಿತು. ಅಂದಿನಿಂದಲೇ ದಕ್ಷ ಆಡಳಿತ, ಪರಿಪೂರ್ಣ ನಿರ್ವಹಣೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಿ, ಧಾರ್ಮಿಕ – ಸಾಮಾಜಿಕ ಕಾರ್ಯದಲ್ಲಿ ಧನಾತ್ಮಕ ಬದಲಾವಣೆಯನ್ನು ತರುವುದರ ಮುಖಾಂತರ ಶ್ರೀಮಠದ ಆಡಳಿತವು ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. ಇವೆಲ್ಲವುಗಳನ್ನು ಐ.ಎಸ್.ಓ ಪ್ರಮಾಣಪತ್ರವು ಸ್ಥಿರೀಕರಿಸುವಂತಿದೆ.

ರಾಘವೇಶ್ವರ ಶ್ರೀ ಮಾರ್ಗದರ್ಶನ :

ರಾಘವೇಶ್ವರ ಶ್ರೀ ಆಶೀರ್ವಾದ, ಮಾರ್ಗದರ್ಶನ
ದೇವಾಲಯದ ನಿರ್ವಹಣೆಯ ಪ್ರತಿ ಹಂತದಲ್ಲಿಯೂ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀಮಹಾಸ್ವಾಮಿಗಳು ಮಾರ್ಗದರ್ಶನ ಮಾಡುತ್ತಿದ್ದು, ಪೂಜ್ಯ ಶ್ರೀಗಳ ಮಾರ್ಗದರ್ಶನ ಹಾಗೂ ಆಶೀರ್ವಾದದಿಂದ ದೇವಹಿತ – ಭಕ್ತಹಿತ – ಸೇವಕಹಿತಗಳನ್ನು ನಿರ್ವಹಿಸಲು ಸಾಧ್ಯವಾಗಿದೆ ಎಂದು ಶ್ರೀಸಂಸ್ಥಾನ ಮಹಾಬಲೇಶ್ವರ ದೇವಾಲಯದ ಪದನಿಮಿತ್ತ ಆಡಳಿತಾಧಿಕಾರಿಗಳಾದ ಜಿ.ಕೆ. ಹೆಗಡೆ ತಿಳಿಸಿದ್ದಾರೆ.

Leave a Response