Monday, January 20, 2025
ಸುದ್ದಿ

ಶಾಂತದುರ್ಗಾ ದೇವಾಸ್ಥನ ನಿಡ್ಪಳ್ಳಿ 8 ನೇ ದಿನದ ಧಾರ್ಮಿಕ ಸಭೆ – ಕಹಳೆ ನ್ಯೂಸ್

ಶ್ರೀ ಶಾಂತದುರ್ಗ ದೇವಸ್ಥಾನ ಮತ್ತು ಶ್ರೀ ಕಿನ್ನಿ ಮಾಣಿ ಪೂಮಾಣಿ ಪರಿವಾರ ದೈವಸ್ಥಾನದ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವ ಕಾರ್ಯಕ್ರಮವು ಬಹಳ ಅದ್ದೂರಿಯಿಂದ ನಡೆಯುತ್ತಿದ್ದು 8 ನೇ ದಿನದ ಧಾರ್ಮಿಕ ಸಭೆಯು ಪ್ರಮೋದ್ ಅರಿಗ ನಿಡ್ಪಳ್ಳಿಗುತ್ತು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಗುರುದೇವದತ್ತ ಸಂಸ್ಥಾನ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ. ನಿಡ್ಪಳ್ಳಿ ಭಾಗಕ್ಕೆ ಬಂದಾಗ ರಾಜ ವೈಭವವನ್ನು ನೋಡಿದಂತಾಗುತ್ತದೆ ಶಾಂತದುರ್ಗಾ ದೇವರ ಬ್ರಹ್ಮಕಲಶೋತ್ಸವವು ಬಹಳ ಅದ್ದೂರಿಯಿಂದ ನಡೆಯುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಧರ್ಮದ ವಿಚಾರದಲ್ಲಿ ಭಾರತವನ್ನು ವಿಶ್ವ ಧರ್ಮದ ಚಾವಡಿ ಎಂದರೆ ತಪ್ಪಾಗಲಾರದು ಇಲ್ಲಿ ಧರ್ಮದ ಬಗ್ಗೆ ಆಚಾರ ವಿಚಾರವನ್ನು ಪಾಲಿಸುವ ಜನರು ಅಧಿಕ. ಇನ್ನು ವಿಶೇಷವೆಂದರೆ ಈ ನಿಡ್ಪಳ್ಳಿ ಗ್ರಾಮ ಹಿಂದೆ ನಿಧಿಪಳ್ಳ ಎಂದು ಯಾಕೆ ಆಗಿರಬಾರದು ಯಾಕಂದ್ರೆ ಇಲ್ಲಿನ ಭಕ್ತರೆ ಇಲ್ಲಿನ ನಿಧಿಗಳು. ಉತ್ತಮ ಮನಸ್ಸಿನ ಜನರು ವಾಸಿಸುತ್ತಿರುವ ಊರು ನಿಡ್ಪಳ್ಳಿ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಖ್ಯ ಅತಿಥಿಯಾಗಿ ಆಗಮಿಸಿದ ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ ಈ ಕಾರ್ಯಕ್ರಮಕ್ಕೆ ಬಂದಾಗ ತುಂಬಾ ಖುಷಿಯಾಯ್ತು ಯಾಕೆಂದರೆ ದೇವಾಲಯಕ್ಕೆ ಆಗಮಿಸುವ ದಾರಿಯ ಕೆಲ ಕಿಲೋಮೀಟರ್ ಹಿಂದಿನಿಂದಲೆ ದಾರಿಪೂರ ಕೇಸರಿಮಯವಾಗಿ ಕಂಗೊಳಿಸುತ್ತಿತ್ತು.

ಹಿಂದೂ ಧರ್ಮದ ಕೇಸರಿ ಧ್ವಜವು ಇಲ್ಲಿ ರಾರಜಿಸುತ್ತಿತ್ತು. ಹಿಂದೂ ಧರ್ಮವನ್ನು ಉಳಿಸಲು ಧರ್ಮಜಾಗೃತಿಯನ್ನು ಮಾಡಬೇಕು. ಪ್ರತಿಯೊಬ್ಬ ವ್ಯಕ್ತಿಯೂ ದೇಶದ ಸಂಸ್ಕೃತಿಗೆ ಗೌರವ ನೀಡಬೇಕು ಎಂದರು.

ಇನ್ನೋರ್ವ ಅತಿಥಿ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಬಿ ಯಶೋವರ್ಮ ಮಾತನಾಡಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಿಡ್ಪಳ್ಳಿ ಊರು ಸುತ್ತಮುತ್ತದಿಂದ ಶೃಂಗಾರವಾಗಿದ್ದು ದೇವಾಲಯದ ಬಳಿ ವಿಜೃಂಭಣೆಯ ವಾತವರಣ ಸೃಷ್ಠಿಯಾಗಿದೆ. ಇಲ್ಲಿನ ಪ್ರತಿಯೊಂದು ಕೆಲಸವು ಬಹಳ ಸುಸೂತ್ರವಾಗಿ ನಡೆದಿದ್ದು ಅದಕ್ಕೆ ಇಲ್ಲಿನ ಜನರ ಶ್ರಮವೆ ಕಾರಣ. ಮನುಜನ ಪ್ರತಿಯೊಂದು ವಿಚಾರದಲ್ಲಿ ದೇವರ ನೆನಪು ಇರಬೇಕು ಎಂದರು.

ಬಳಿಕ ನಿಡ್ಪಳಿಯ ಜನತೆಗೆ ಮಹಾನ್ ಪುಣ್ಯಚೇತನವಾಗಿ ಕಾಣುವ ಕೃಷ್ಣ ಶೆಟ್ಟಿಯವರು ಇಂದು ನೆನಪು ಮಾತ್ರ. ಬ್ರಹ್ಮಕಲಶೋತ್ಸವ ಸಂಭ್ರಮವೆಂಬ ತಾರಲೋಕದಲ್ಲಿ ದ್ರುವತಾರೆಯಾಗಿ ಕಂಗೊಳಿಸುತ್ತಿದ್ದಾರೆ. ಇವರ ಪರವಾಗಿ ಅವರ ಪತ್ನಿ ಯಮುನಾ ಬೋರ್‌ವೆಲ್ಸ್ ಮಾಲಕರು ದಿವ್ಯಾ ಕೆ ಶೆಟ್ಟಿ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಈ ವೇಳೆ ಬ್ರಹ್ಮಕಶೋತ್ಸವದಲ್ಲಿ ಸಹಕರಿಸಿದ ದಾನಿ ಯಮುನಾ ಬೋರ್‌ವೆಲ್ಸ್ ಮಾಲಕರಾದ ದಿವ್ಯಾ ಕೆ ಶೆಟ್ಟಿಯನ್ನು ಮತ್ತು ಗಣ್ಯರನ್ನು ಗೌರವಿಸಿ ಸನ್ಮಾನಿಲಾಯಿತು. ಈ ವೇಳೆ ಕರ್ನಾಟಕ ಸರಕಾರದ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ, ವಕೀಲೆ ಕೃಪಾ ಶಂಕರ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪ್ರಭಾಕರ್ ಭಟ್ ಕಲ್ಲಡ್ಕ ಮತ್ತಿತ್ತರರು ಉಪಸ್ಥಿತರಿದ್ದರು.