ಮಂಗಳೂರು : ತಲೆಯಲ್ಲಿ ಬೈ ಹುಲ್ಲು ಹಿಡಿದು ಬಳಿಕುತ್ತಾ ಹೆಜ್ಜೆ ಹಾಕ್ತಾ ಇರೋ ರೈತರು, ಮುಟ್ಟಾಳೇ ತೊಟ್ಟು ಕೈ ಬೀಸಿ ಸ್ಟೈಲಾಗಿ ಫೋಸ್ ನೀಡ್ತಾ ಇರೋ ದಂಪತಿಗಳು , ನೋಡ್ತಾ ಇದ್ರೆ ಯಾವ ಮಾಡೆಲ್‍ಗಳಿಗೂ ಕಮ್ಮಿ ಅನ್ನಿಸೋ ನಡೆ, ಹೌದು ರೈತರು ಮಾಡೆಲ್‍ಗಳಂತೆ ಹೆಚ್ಚೆ ಹಾಕಿ ಪೋಸ್ ಕೊಟ್ಟಿದ್ದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಮಿಫ್ಟ್ ಕಾಲೇಜಿನ ಸಹಯೋಗದೊಂದಿಗೆ ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆದ ಕೃಷಿಕರ ಫ್ಯಾಶನ್ ಶೋನಲ್ಲಿ.
ಈ ಹಿನ್ನೆಲೆಯಲ್ಲಿ ಮುಡಿಪು ಗ್ರಾಮದ 20 ಜನ ರೈತರು ವೃತ್ತಿಪರ ಮಾಡೆಲ್‍ಗಳಂತೆ ತುಳು ಸಂಪ್ರದಾಯದ ಉಡುಗೆ-ತೊಡುಗೆಗಳೊಂದಿಗೆ ಕ್ಯಾಟ್ ವಾಕ್ ಮಾಡಿ ಜನ ಮನ್ನಣೆಗಳಿಸಿದರು.
ಮಿಸೆಸ್ ಯೂನಿವರ್ಸಲ್‍ಗೆ ಉಡುಪಿಯ ಡಾ.ಪದ್ಮಾ ಗಡಿಯಾರ್ ಆಯ್ಕೆ ಅಷ್ಟೇ ಅಲ್ಲ, ಮಿಫ್ಟ್ ವಿದ್ಯಾರ್ಥಿಗಳೇ ತಯಾರಿಸಿದ 50 ಕ್ಕೂ ಮಿಕ್ಕಿದ ಗಾಮೆರ್ಂಟ್‍ಗಳನ್ನು ಧರಿಸಿ ಫ್ಯಾಶನ್ ಶೋ ಜರುಗಿತು.
ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧಕರನ್ನ ಸನ್ಮಾನಿಸಲಾಯಿತು.ಜೊತೆಗೆ ಅನೇಕ ರೈತರು ಹಾಗೂ ಗಣ್ಯರು ಭಾಗವಹಿಸಿದ್ದರು.