Monday, January 20, 2025
ಸುದ್ದಿ

ಸಾಲುಮರದ ತಿಮ್ಮಕ್ಕನಿಗೆ ಒಲಿದ ಪದ್ಮ ಪ್ರಶಸ್ತಿ- ಕಹಳೆ ನ್ಯೂಸ್

ಮರ ಎಂದಾಕ್ಷಣ ಮನದಲ್ಲಿ ಮೂಡಿ ಬರುವವರೇ ಸಾಲು ಮರದ ತಿಮ್ಮಕ್ಕ. ಪ್ರಕೃತಿ ಮಾತೆಯನ್ನ ಬೆಳೆಸಿ ಪೋಷಿಸುವ ಮಹತ್ಕಾರ್ಯ ಮಾಡಿರುವ ತಿಮ್ಮಕ್ಕ ನಮ್ಮೆಲ್ಲರ ಹೆಮ್ಮೆ ಹಾಗೂ ಅದರ್ಶ ವ್ಯಕ್ತಿಯು ಹೌದು.

ಜಾಹೀರಾತು
ಜಾಹೀರಾತು
ಜಾಹೀರಾತು

ಮದುವೆಯಾಗು ಅನೇಕ ವರ್ಷ ಕಳೆದರು ಮಕ್ಕಳಾಗದೇ ಹೋದಾಗ, ಆ ದುಖಃವನ್ನು ಮರೆಯಲು ತಿಮ್ಮಕ್ಕ ಆಲದ ಮರವನ್ನ ನೆಡಲು ಪ್ರಾರಂಬಿಸಿದರು. ಮರಗಳನ್ನೆ ಮಕ್ಕಳಂತೆ ಪ್ರೀತಿಯಿಂದ ಬೆಳೆಸಿದರು, ಮುಂದೆ ಸಾವಿರಾರು ಮರಗಳನ್ನು ಬೆಳೆಸಿದ ಕೀರ್ತಿ ಇವರ ಪಾಲಿಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂತಹ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಸೇರಿ ಹಲವು ಸಾಧಕರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪದ್ಮ ಪ್ರಶಸ್ತಿಗಳನ್ನು ಪ್ರದಾನಿಸಿದರು.

ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ರಿಗೆ ಪದ್ಮ ಶ್ರೀ, ಇಸ್ರೋ ವಿಜ್ಞಾನಿ ನಂಬಿ ನಾರಾಯಣ್‍ರಿಗೆ ಪದ್ಮ ಭೂಷಣ, ಹವಿರ್ಂದರ್ ಸಿಂಗ್ ಫೂಲ್ಕಾರಿಗೆ ಪದ್ಮ ಶ್ರೀ, ಬಚೇಂದ್ರಿ ಪಾಲ್ ರಿಗೆ ಪದ್ಮ ಭೂಷಣ, ಸಾಲುಮರದ ತಿಮ್ಮಕ್ಕರಿಗೆ ಪದ್ಮ ಶ್ರೀ ಸೇರಿದಂತೆ ಹಲವು ಸಾಧಕರನ್ನು ಪುರಸ್ಕರಿಸಲಾಯಿತು.