Recent Posts

Monday, January 20, 2025
ಸುದ್ದಿ

ಯಕ್ಷಗಾನದಲ್ಲಿ ಕುಮಾರ ವ್ಯಂಗ್ಯ; ಬಪ್ಪನಾಡು ಕಲಾವಿರ ಹಾಸ್ಯ ಫುಲ್ ಟ್ರೋಲ್ – ಕಹಳೆ ನ್ಯೂಸ್

ಮಂಗಳೂರು: ಈಗಾಗಲೇ ಟ್ರೋಲ್ ಒಳಗಾಗಿರುವ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ನಡುವಿನ ಸಂಭಾಷಣೆ ಯಕ್ಷಲೋಕದಲ್ಲೂ ಭರ್ಜರಿ ಸದ್ದು ಮಾಡ್ತಾಯಿದೆ. ನಿಖಿಲ್ ಎಲ್ಲಿದ್ದೀಯಪ್ಪಾ, ಜನರ ಮಧ್ಯೆ ಆಗ್ಲೇ ಸೇರಿಬಿಟ್ಟಿದ್ದೀಯಾ ಅನ್ನುವ ಈ ಸಂಭಾಷಣೆ ಈಗ ಎಲ್ಲರ ಅಚ್ಚುಮೆಚ್ಚಿನ ಸ್ಟೇಟಸ್ ಟ್ರೋಲ್ ಆಗಿರೋದಂತೂ ಸುಳ್ಳಲ್ಲ.

ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯ ಪ್ರಸಂಗದ ತುಣುಕು ಇದಕ್ಕೆ ಸಾಕ್ಷಿಯಾಗಿದೆ. ಅದರಲ್ಲೂ ಈ ಹಾಸ್ಯದ ತುಣುಕು ಪ್ರಸಿದ್ಧ ಹಾಸ್ಯ ಕಲಾವಿದರ ಬಾಯಲ್ಲಿ ವಿಭಿನ್ನವಾಗಿ ಯಕ್ಷ ಪ್ರಿಯರನ್ನು ತಲುಪಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ಗೊಳಗಾಗಿ ಹಾಸ್ಯಕ್ಕೆ ಕಾರಣವಾಗಿದೆ. ಖ್ಯಾತ ಹಾಸ್ಯ ಕಲಾವಿದರಾದ ಪ್ರಸನ್ನ ಶೆಟ್ಟಿ ಬೈಲೂರು, ಕಡಬ ಶ್ರೀನಿವಾಸ ರೈ ಯಕ್ಷ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಭಿಕರ ಮಧ್ಯೆಯಿಂದ ಖ್ಯಾತ ಹಾಸ್ಯ ಕಲಾವಿದ ದಿನೇಶ್ ಕೊಡಪಡವು ನಟಿಸಿದ್ದಾರೆ. ಯಕ್ಷಗಾನದ ಚೌಕಟ್ಟು ಮೀರದಂತೆ ಹಾಗೂ ಯಾರಿಗೂ ನೋವಾಗಬಾರದೆನ್ನುವ ದೃಷ್ಟಿಕೋನದಿಂದ ಯಥಾವತ್ತಾಗಿ ಸಂಭಾಷಣೆ ಗೊತ್ತು ಮಾಡದೇ, ‘ವಾಮನ ಎಲ್ಲಿದ್ದೀಯಾ, ನೀನು ಬಿರುದು ಸಿಕ್ಕಿದ ಕೂಡಲೇ ಜನರ ಮಧ್ಯೆ ಹೋಗಿ ಕೂತಿದ್ದೀಯ ಮಗಾ’ ಎನ್ನುವ ಕಾಲ್ಪನಿಕ ಸಂಭಾಷಣೆ ನಡೆಯುತ್ತೆ. ಇದು ಹೆಚ್ಡಿಕೆ- ನಿಖಿಲ್ ಕುಮಾರಸ್ವಾಮಿ ನಡುವಿನ ಸಂಭಾಷಣೆಯಂತೆಯೇ ಭಾಸವಾಗುತ್ತಿದ್ದು, ಯಕ್ಷಾಭಿಮಾನಿಗಳ ಅಚ್ಚುಮೆಚ್ಚಿನ ಟ್ರೋಲ್ ತುಣುಕಾಗಿ ಹರಿದಾಡತೊಡಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು