Monday, January 20, 2025
ಸುದ್ದಿ

ಉಡುಪಿಯಲ್ಲಿ ನಡೆದ ಬೈಕ್ ಸ್ಟಂಟ್: ನೋಡುಗರು ಫೀದಾ- ಕಹಳೆ ನ್ಯೂಸ್

ಉಡುಪಿ: ಉಡುಪಿಯಲ್ಲಿ ನಡೆದ ಬೈಕ್ ಸ್ಟಂಟ್ ಕಂಡು ನೋಡುಗರು ಫೀದಾ ಆಗೋಗಿದ್ದಾರೆ, ಹೌದು ರೊಮ್ಯಾಂಟಿಕ್ ಆಗಿ ಸುತ್ತುತ್ತಾ ಮನರಂಜಿಸಿದ ಬೈಕ್ ರೈಡರ್. ಒಂಟಿ ಚಕ್ರದಲ್ಲಿ ಬೈಕ್ ಓಡಿಸುತ್ತಾ ಕುಪ್ಪಳಿಸುತ್ತಾ ಬಂದ ರೈಡರ್‌ಗಳು ಚಲಿಸುವ ಬೈಕಿನ ಮೇಲೆ ತಾವೂ ಒಂಟಿ ಕಾಲಿನಲ್ಲಿ ನಿಂತು ನಾನಾ ಕಸರತ್ತು, ಎರಡೂ ಕಾಲುಗಳನ್ನು ಹ್ಯಾಂಡಲ್‌ನ ಮುಂದಕ್ಕೆ ಚಾಚಿ, ಕೈ ಎರಡನ್ನೂ ಮೇಲಕ್ಕೆತ್ತಿ ರೋಮಾಂಚನ ಸಾಹಸ, ಇವೆಲ್ಲವನ್ನ ಕಂಡು ನೆರೆದ ಜನರಂತೂ ತುದಿಗಾಲಲ್ಲಿ ನಿಂತು ಚಪ್ಪಾಳೆಯ ಸುರಿಮಳೆಗೈದರು.

ತಮಿಳುನಾಡು ಮೂಲದ ಇಬ್ಬರು ತರುಣರು ನಡೆಸಿಕೊಟ್ಟ ಬೈಕ್ ಸ್ಟಂಟ್ಸ್ ನೋಡುಗರನ್ನು ಬೆಕ್ಕಸ ಬೆರಗಾಗುವಂತೆ ಮಾಡಿತು. ರೇಸ್ ಬೈಕ್‌ಗಳಲ್ಲಿ ನಂಬರ್ ಒನ್ ಆಗಿರೋ ಕೆಟಿಎಂ ಕಂಪನಿಯ ಬೈಕ್‌ನ ಪ್ರಚಾರಕ್ಕೆ ನಡೆದ ಸಾಹಸಗಳು ನಿಜಕ್ಕೂ ಸೂಪರ್ ಆಗಿತ್ತು. ಒಂದಲ್ಲ ಎರಡಲ್ಲ ನೂರಾರು ಬಗೆಯ ಬೈಕ್ ಸ್ಟಂಟ್‌ಗಳು ಒಂದು ಗಂಟೆಗೂ ಅಧಿಕ ಕಾಲ ನೋಡುಗರನ್ನು ಅಚ್ಚರಿಯಲ್ಲಿ ತಳ್ಳಿತು.
ನಾಲ್ಕೂ ಕಡೆ ನಿಂತಿದ್ದ ನೋಡುಗರು ನಿಂತಲ್ಲೇ ದಂಗಾಗಿದ್ದರು. ರಿವರ್ಸ್ ಬೈಕ್ ರೈಡಿಂಗ್, ಬೆಂಕಿಯೊಂದಿಗೆ ಸರಸ ಹೀಗೆ ಹಠಕ್ಕೆ ಬಿದ್ದವರಂತೆ ಇಬ್ಬರೂ ರೈಡರ್‌ಗಳು ಪೈಪೋಟಿ ನಡೆಸಿದರು. ಹೀಗೆ ಒಂದರ ಹಿಂದೆ ಇನ್ನೊಂದು ಸಾಹಸಗಳು ಮೂಡಿಬರುತ್ತಿದ್ದರೆ, ಯುವಕರು ಹುಚ್ಚೆದ್ದು ಕುಣಿಯುತ್ತಿದ್ದರು. ತಮಿಳುನಾಡು ಮೂಲದ ಈ ಇಬ್ಬರು ಬೈಕ್ ರೈಡರ್‌ಗಳು ಈ ಥರದ ಬೈಕ್ ಮ್ಯಾಜಿಕ್ ಮಾಡೋದರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಫೇಮಸ್.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಟಂಟ್ಸ್ ನೋಡಲು ದೇಶದಲ್ಲೇ ಅತೀ ಹೆಚ್ಚು ದ್ವಿಚಕ್ರ ವಾಹನ ಬಳಸುವ ಕ್ಯಾಂಪಸ್‌ಗಳಲ್ಲಿ ಒಂದಾದ ಮಣಿಪಾಲ ಮತ್ತು ಉಡುಪಿ ಪರಿಸರದ ವಿದ್ಯಾರ್ಥಿಗಳ ದಂಡೇ ಸೇರಿತ್ತು. ಎರಡು ಚಕ್ರದ ವಾಹನದಲ್ಲಿ ಏನೆಲ್ಲಾ ಮ್ಯಾಜಿಕ್ ಮಾಡಬಹುದೋ, ಎಲ್ಲವೂ ಇಲ್ಲಿ ಪ್ರದರ್ಶನವಾಯ್ತು. ಅಂತಾರಾಷ್ಟ್ರೀಯ ಗುಣಮಟ್ಟದ ಸಾಹಸಗಳು ಉಡುಪಿಯಲ್ಲಿ ಹೊಸ ಹವಾ ಸೃಷ್ಟಿಸಿದ್ದು ಸುಳ್ಳಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು