Monday, January 20, 2025
ಸುದ್ದಿ

ಒಣ ಹುಲ್ಲಿಗೆ ತಗುಲಿದ ಬೆಂಕಿ: ತಪ್ಪಿದ ಅವಘಡ-ಕಹಳೆ ನ್ಯೂಸ್

ಬಳ್ಳಾರಿ ರಸ್ತೆ ಜಕ್ಕೂರಿನಲ್ಲಿರುವ ಸರಕಾರಿ ವಿಮಾನ ಹಾರಾಟ ತರಬೇತಿ ಶಾಲೆ ಆವರಣದಲ್ಲಿ ಬೆಳೆದು ನಿಂತಿರುವ ಒಣ ಹುಲ್ಲಿಗೆ ಬೆಂಕಿ ಹೊತ್ತಿಕೊಂಡು ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಶನಿವಾರ ಸಂಜೆ ೭ ಗಂಟೆ ಸುಮಾರಿಗೆ ಕಾಣಿಸಿಕೊಂಡ ಬೆಂಕಿ ಹಂತ ಹಂತವಾಗಿ ವ್ಯಾಪಿಸುತ್ತಿತ್ತು. ಇದನ್ನು ಗಮನಿಸಿ ಶಾಲೆಯ ಸಿಬ್ಬಂದಿ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವಷ್ಟರಲ್ಲಿ ಹತ್ತಾರು ಮೀಟರ್‌ನಷ್ಟು ದೂರಕ್ಕೆ ಹಬ್ಬಿತ್ತು. ವಿಮಾನ ನಿಲ್ದಾಣ ಮೇಲುರಸ್ತೆಯಲ್ಲಿ ಹೋಗುತ್ತಿದ್ದ ವಾಹನ ಸವಾರರು ಹಾಗೂ ಕಟ್ಟಡಗಳಲ್ಲಿನ ವಾಸಿಗಳು ಆತಂಕದಲ್ಲಿ ಬೆಂಕಿಯನ್ನು ನೋಡುತ್ತಿದ್ದರು. ಸಂಜೆ ಗಾಳಿ ಜೋರಾಗಿದ್ದರಿಂದ ಒಣ ಹುಲ್ಲು ಇರುವ ಕಡೆ ವೇಗವಾಗಿ ಬೆಂಕಿ ವ್ಯಾಪಿಸಿತು.
”ಮಾಹಿತಿ ಬಂದ ಕೂಡಲೇ ಯಲಹಂಕದಿಂದ ಒಂದು ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಆಸ್ತಿ-ಪಾಸ್ತಿ ಮತ್ತು ಪ್ರಾಣಹಾನಿ ಸಂಭವಿಸಿಲ್ಲ. ಬೇಸಿಗೆ ಬಿಸಿಲಿನ ಕಾರಣ ಒಣಗಿದ್ದ ಹುಲ್ಲಿಗೆ ಬೆಂಕಿ ಹತ್ತಿಕೊಂಡಿತ್ತು. ನಂತರ ಅದು ವೇಗವಾಗಿ ಹರಡಿತ್ತು” ಎಂದು ಅಗ್ನಿಶಾಮಕ ಅಧಿಕಾರಿ ತಿಳಿಸಿದರು. ಒಣಗಿದ ಹುಲ್ಲಿಗೆ ಬೆಂಕಿ ಹೊತ್ತಿಕೊಂಡಿತ್ತು. ಆದರೆ, ಅದು ಹೇಗೆ ಆರಂಭವಾಗಿದೆ ಎಂದು ಗೊತ್ತಿಲ್ಲ ಎಂದು ಅಮೃತಹಳ್ಳಿ ಠಾಣೆ ಪೊಲೀಸರು ತಿಳಿಸಿದರು.
ಇತ್ತಿÃಚೆಗೆ ಯಲಹಂಕ ಸಮೀಪದ ವಾಯುನೆಲೆಯಲ್ಲಿ ಏರ್ ಶೋ ಪಾರ್ಕಿಂಗ್ ಸ್ಥಳದಲ್ಲಿ ಒಣ ಹುಲ್ಲಿಗೆ ಬೆಂಕಿ ಬಿದ್ದು ಕಾರುಗಳಿಗೆ ಬೆಂಕಿ ಬಿದ್ದು ಭಸ್ಮವಾದ ಘಟನೆ ಬಳಿಕ ಜಕ್ಕೂರು ಏರೋ ಡ್ರಮ್‌ನಲ್ಲಿಯೂ ಬೆಂಕಿ ಕಾಣಿಸಿಕೊಂಡಿದ್ದರಿಂದ ಸ್ಥಳೀಯರು ಆತಂಕಗೊಂಡಿದ್ದರು. ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ಬೇಗನೆ ನಂದಿಸಿದ್ದರಿಂದ ಎಲ್ಲರೂ ನಿಟ್ಟುಸಿರುಬಿಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು