ಶ್ರೀ ಗುರು ಚರಣಕೆ ನಮಿಸಲು ಬನ್ನಿ|
ಶ್ರೀ ರಾಮ ಜಯರಾಮ ಎನ್ನುತ ಬನ್ನಿ ||
ಶ್ರೀ ಗುರುಪಾದಕೆ ನಮಿಸೋಣ|
ಶ್ರೀ ರಾಮನ ಭಜಿಸುತ ನಲಿಯೋಣ||೧||
ಹಣ್ಣುಕಾಯಿ ತುಳಸಿ ಹೂವಲಿ|
ಅರ್ಚಿಸಿ ಶ್ರೀ ಗುರು ಚರಣಗಳ||
ಪಾದ ಪೂಜೆಯನು ಮಾಡುತಲಿ|
ಬಾಳುವ ನೆಮ್ಮದಿ ತೋಷದಲಿ||೨||
ಅಣ್ಣ ಬಾರೋ ತಮ್ಮ ಬಾರೋ|
ಅಣ್ಣತಮ್ಮ ಅಕ್ಕತಂಗಿ ಬನ್ನಿರೆಲ್ಲರು||
ಹಿರಿಯರಿಗೆ ವಂದಿಸಿ ಕಿರಿಯರಿಗೆ ಸ್ಪಂದಿಸಿ|
ದುಗುಡದುಮ್ಮಾನವನೆಲ್ಲ ಕಳೆಯಿರೊ||೩||
ಬನ್ನಿ ಬನ್ನಿ ಬನ್ನಿ ಬನ್ನಿ ಬನ್ನಿ ಬನ್ನಿ ಬನ್ನಿ ಬನ್ನಿ|
ಬನ್ನಿ ಬನ್ನಿ ಬನ್ನಿ ಬನ್ನಿ ಬನ್ನಿರೆಲ್ಲರು||
ಎನ್ನಿ ಎನ್ನಿ ಎನ್ನಿ ಎನ್ನಿ ಎನ್ನಿ ಎನ್ನಿ ಎನ್ನಿ ಎನ್ನಿ|
ಎನ್ನಿ ಎನ್ನಿ ರಾಮ ರಾಮನೆನ್ನಿರೊ||೪||