Monday, January 20, 2025
ಸುದ್ದಿ

ಹೆಮ್ಮೆಯ ಯೋಧರಿಗಿನ್ನು ಕರ್ನಾಟಕದಿಂದ ನಂದಿನಿ ಹಾಲು ಸರಬರಾಜು – ಕಹಳೆ ನ್ಯೂಸ್

ಕರ್ನಾಕಕ್ಕೆ ಹೆಮ್ಮೆಯ ವಿಚಾರವೊಂದು ಬಂದೊದಗಿದೆ. ಭಾರತೀಯ ಸೈನಿಕರಿಗೆ ಇನ್ನು ಮುಂದೆ ಕರ್ನಾಟಕದಿಂದ ಹಾಲು ಸರಬರಾಜು ಆಗುತ್ತದೆ. ಈ ಬಗ್ಗೆ ಮಂಡಳಿ ನಿರ್ದೇಶಕ ಮೃತ್ಯುಂಜಯ.ಟಿ.ಕುಲಕರ್ಣಿ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ‘ಭಾರತೀಯ ಯೋಧರಿಗೆ ನಂದಿನಿ ಯುಎಚ್‌ಟಿ ಹಾಲು ಸರಬರಾಜು ಮಾಡಲು ಮುಂದಾಗಿರುವ ಕರ್ನಾಟಕ ಹಾಲು ಮಹಾಮಂಡಳಿ ಈ ಸಂಬಂಧ ಕೇಂದ್ರ ರಕ್ಷಣಾ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿಂದೆ ವಿಶ್ವದ ಅತ್ಯಂತ ಶ್ರೀಮಂತ ದೇಗುಲ ತಿರುಪತಿ ತಿಮ್ಮಪ್ಪನ ದೇಗುಲಕ್ಕೆ ಹಾಲು ಸರಬರಾಜು ಮಾಡುವ ಮೂಲಕ ಖ್ಯಾತಿ ಗಳಿಸಿದ್ದ ಕರ್ನಾಟಕ ಹಾಲು ಮಹಾ ಮಂಡಳಿ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿದೆ.
‘ಕೋಲಾರ ಮತ್ತು ಹಾಸನ ಹಾಲು ಒಕ್ಕೂಟದಿಂದ ನಿತ್ಯ ೧೮ ಸಾವಿರ ಲೀಟರ್ ಹಾಲನ್ನು ಸೈನಿಕರಿಗೆ ಒದಗಿಸಲಾಗುತ್ತದೆ. ಹಾಗೆಯೇ ತಿರುಪತಿ ದೇವಸ್ಥಾನದಲ್ಲಿ ತಯಾರಿಸುವ ಲಡ್ಡು ಪ್ರಸಾದಕ್ಕೆ ೧೪ ಲಕ್ಷ ಕೆ.ಜಿ ನಂದಿನಿ ತುಪ್ಪ ಒದಗಿಸಲು ದೇವಸ್ಥಾನದ ಮಂಡಳಿಯ ಒಪ್ಪಿಗೆ ಪಡೆದಿದ್ದೇವೆ. ಹೊರ ರಾಜ್ಯಗಳಲ್ಲಿ ನಂದಿನಿ ಹಾಲು, ಮೊಸರಿಗೆ ಹೆಚ್ಚು ಬೇಡಿಕೆ ಬಂದಿರುವ ಕಾರಣ ದಿನಕ್ಕೆ ೨.೫೦ ಲಕ್ಷಕ್ಕೂ ಹೆಚ್ಚು ಲೀಟರ್ ಹಾಲು ಸರಬರಾಜು ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಈ ಎಲ್ಲ ಮಾರುಕಟ್ಟೆ ಪ್ರದೇಶಗಳನ್ನು ಇನ್ನೂ ವಿಸ್ತರಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ’ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂತೆಯೇ ‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಸಂಸ್ಥೆ ಉತ್ಪಾದಿಸುವ ಆಹಾರ ಪದಾರ್ಥಗಳಿಗೆ ೬೦೦ ಮೆಟ್ರಿಕ್ ಟನ್ ನಂದಿನಿ ಕೆನೆರಹಿತ ಹಾಲಿನ ಪುಡಿ ಒದಗಿಸುತ್ತಿದ್ದು, ನಂದಿನಿ ಚೆದ್ದಾರ್ ಚೀಸ್, ಚೀಸ್ ಸ್ಲೈಸ್ ಸೇರಿದಂತೆ ಬಗೆಬಗೆಯ ಪದಾರ್ಥಗಳು ಹಾಗೂ ನಂದಿನಿ ಸಿಹಿ ತಿನಿಸುಗಳಂತೆ ಮುಂದಿನ ದಿನಗಳಲ್ಲಿ ಸಿರಿಧಾನ್ಯ ಲಡ್ಡು ಮತ್ತು ಹಾಲಿನ ಪುಡಿ ಶೀಘ್ರದಲ್ಲೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ. ಅಲ್ಲದೆ, ವಿವಿಧ ಬಗೆಯ ೨೨ ಐಸ್ ಕ್ರೀಂ ಸಿಹಿ ತಿನಿಸುಗಳನ್ನು ಬಿಡುಗಡೆಗೆ ಮಾಡಲಾಗುವುದು. ದೇಶದ ೧೬ ನಗರಗಳಲ್ಲಿ ಮುಂಬೈನ ಟ್ರಾ ಸಂಶೋಧನಾ ಸಂಸ್ಥೆಯು ೫ ಸಾವಿರ ವಿವಿಧ ಉತ್ಪನ್ನಗಳನ್ನು ಸಮೀಕ್ಷೆ ನಡೆಸಿದ್ದು, ಅದರಲ್ಲಿ ನಂದಿನಿ ಹಾಲಿಗೆ ದಕ್ಷಿಣ ಭಾರತದ ಅತ್ಯಂತ ಆಕರ್ಷಕ ಹಾಲಿನ ಬ್ರಾಂಡ್ ಎಂಬ ಪ್ರಶಸ್ತಿಗೆ ಪಾತ್ರವಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.