Tuesday, January 21, 2025
ಸುದ್ದಿ

ಬೈಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿ:ಬೈಕ್ ಸವಾರ ಸಾವು – ಕಹಳೆ ನ್ಯೂಸ್

ಸುಳ್ಯ: ಸುಳ್ಯ ಮಡಿಕೇರಿ ರಾಜ್ಯ ಹೆದ್ದಾರಿಯ ಕಲ್ಚೆರ್ಪೆ ಎಂಬಲ್ಲಿ ಬೈಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿ ಯಾಗಿ ಬೈಕ್ ಸವಾರ ಸ್ಥಳದಲ್ಲೆ ದಾರುಣವಾಗಿ ಮೃತಪಟ್ಟ ಘಟನೆ ನಿನ್ನೆ ಸಂಜೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೈಕ್ ಸವಾರ ಕುಂದಲಪಾಡಿ ದೇವಪ್ಪ ಎಂಬವರ ಪುತ್ರ ದೀಪಕ್ ಎಂದು ಗುರುತಿಸಲಾಗಿದ್ದು, ದೀಪಕ್ ಸುಳ್ಯದಿಂದ ಅರಂತೋಡು ತನ್ನ ಮನೆಗೆ ತೆರಳುತ್ತಿದ್ದಾಗ ಎದುರಿನಿಂದ ಮಡಿಕೇರಿ ಕಡೆಯಿಂದ ವೇಗವಾಗಿ ಬಂದ ಕಾರು  ಬೈಕ್‌ಗೆ ಡಿಕ್ಕಿ ಹೊಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರಿಂದ ರಸ್ತೆಗೆ ಎಸೆಯಲ್ಪಟ್ಟ ದೀಪಕ್‌ನ ತಲೆ ಡಾಮಾರು ರಸ್ತೆಗೆ ಬಡಿದು ದಾರುಣವಾಗಿ ಮೃತಪಟ್ಟಿದ್ದಾರೆ. ಕಾರು ಕೂಡ ಸಂಪೂರ್ಣ ನಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದವರಿಗೂ ಅಲ್ಪ ಪ್ರಮಾಣದ ಗಾಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ, ಸುಳ್ಯ ಪೋಲಿಸ್ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ