ಮಂಗಳೂರು : ಅನಧಿಕೃತವಾಗಿ ನಗದು ಪಣವಾಗಿಟ್ಟು ಜೂಜಾಡುತ್ತಿದ್ದ ೭೦ ಜನರನ್ನು ಪೊಲೀಸರು ಬಂಧಿಸಿದ ಘಟನೆ ಬಂಟ್ವಾಳದ ಮೆಲ್ಕಾರ್, ಪಾಣೆ ಮಂಗಳೂರಿನ ಜಿ.ಸಿ.ಪ್ರಸನ್ನ ಕಾಂಪ್ಲೆಕ್ಸ್ನ ಬಂಟ್ವಾಳ ರಿಕ್ರಿಯೇಷನ್ ಕ್ಲಬ್‌ನಲ್ಲಿ ನಡೆದಿದೆ. ಈ ವೇಳೆ ಜೂಜಾಟ ಆಡಲು ಪಣಕಿಟ್ಟಿದ್ದ ೭೨,೧೦೦ ರೂ. ಹಾಗೂ ೧ ಲಕ್ಷ ರೂ. ಮೌಲ್ಯದ ೫೧ ಮೊಬೈಲ್ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ
.
ಅಕ್ರಮವಾಗಿ ಜೂಜಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳ ನ್ಯಾಯಾಧೀಶರ ಆದೇಶದಂತೆ ದಾಳಿ ನಡೆಸಿದ ಬಂಟ್ವಾಳ ಎಎಸ್ಪಿ, ಎಸ್‌ಐ ಮಂಜುನಾಥ್, ಸಂಚಾರ ಠಾಣೆ, ಬಂಟ್ವಾಳ ಹಾಗೂ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ಮೆಲ್ಕಾರ್‌ನಲ್ಲಿರುವ ಬಂಟ್ವಾಳ ರಿಕ್ರಿಯೇಷನ್ ಕ್ಲಬ್ ಮೇಲೆ ದಾಳಿ ನಡೆಸಿದ್ದಾರೆ.