ತುಮಕೂರಿನ ಶ್ರಿÃ ಸಿದ್ಧಗಂಗಾ ಮಠದಲ್ಲಿ ಏ.೧ರಂದು ಡಾ. ಶಿವಕುಮಾರ ಸ್ವಾಮೀಜಿಯವರ ೧೧೨ನೇ ಜನ್ಮದಿನದ ಅಂಗವಾಗಿ ಉಚಿತ ಸಾಮೂಹಿಕ ನಾಮಕರಣ ಮಹೋತ್ಸವವನ್ನ್ನು ಡಾ. ಶಿವಕುಮಾರ ಸ್ವಾಮೀಜಿಯವರ ಭಕ್ತಾಧಿಗಳ ಅಸೋಸಿಯೇಷನ್ ಹಮ್ಮಿಕೊಂಡಿದೆ.
ನವಜಾತ ಶಿಶುಗಳಿಗೆ ಶ್ರಿÃಗಳ ಹೆಸರನ್ನು ಇಟ್ಟು ನಾಮಕರಣ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಭಾಗವಹಿಸುವ ನವಜಾತ ಶಿಶುಗಳಿಗೆ ಉಚಿತ ತೊಟ್ಟಿಲು, ಶ್ರಿÃಗಳ ಭಾವಚಿತ್ರ ಇರುವ ಬೆಳ್ಳಿಯ ಪದಕ, ಹೊಸ ಉಡುಪು, ಹೊಸ ಹಾಸಿಗೆ ಮತ್ತು ಜನ್ಮ ದಿನಕ್ಕೆ ತಕ್ಕಂತೆ ಜಾತಕ ಬರೆಸಿಕೊಡಲಾಗುವುದು ಎಂದು ಎನ್ನಲಾಗಿದೆ.
ಮಹೋತ್ಸವದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಮೊದಲಾದವರು ಭಾಗವಹಿಸಲಿದ್ದಾರೆ. ಆಸಕ್ತರು ಪೋಷಕರು ಮಗುವಿನ ಜನ್ಮ ಪ್ರಮಾಣ ಪತ್ರ, ಪೋಷಕರ ಮತ್ತು ಮಗುವಿನ ಭಾವಚಿತ್ರ, ಸಾಕ್ಷಿದಾರರ ವಿಳಾಸ, ಶಿಶುವಿನ ವೈದ್ಯ ವಿವರಗಳನ್ನು ಮಾ. ೨೬ರೊಳಗೆ ನೋಂದಣಿ ಮಾಡಿಸಬೇಕು. ಆದರೆ ಈ ಮೊದಲೇ ನಾಮಕರಣ ಆಗಿರುವ ಮಕ್ಕಳಿಗೆ ಅವಕಾಶ ಇಲ್ಲ. ಎನ್ನಲಾಗಿದೆ.