Sunday, January 19, 2025
ಅಂಕಣ

” ಸುಬ್ರಹ್ಮಣ್ಯ ಷಷ್ಠಿವ್ರತ ” ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ಗುರುಪಾದಪದ್ಮ ಕವನಗಳ ಸರಣಿ – 29

ಮಾಡು ವ್ರತವನು ಕ್ಷೇತ್ರದಿ|
ಮಾಡು ವ್ರತವನು ಸಾಂಗದಿ||
ಮಾಡು ಸ್ಕಂದನ ಸದ್ವ್ರತ|
ನೀಡುವನು ಮನದಿಷ್ಟ ಸಂತತ||೧||

ವರವ್ರತಕೆ ಶುದ್ಧ ಪಂಚಮಿ ಷಷ್ಠಿಯ|
ಶುಭವು ಶೌರಿಯ ವಾರವು||
ದೊರಕಲುತ್ತಮ ಕುಮಾರಧಾರ ದಲ್ಲಿ ಸ್ನಾನ ಸಂಕಲ್ಪವೂ||
ಸಂಚಿಯಿಸಿ ಪರಿಮಳದ ಹೂವುಗಳ |ಪತ್ರವ
ನರೆಹಿ ದೇವರ ಎದುರಲಿ|
ಇರಿಸಿ ಕಲಶ ಸುಯಂತ್ರ ಚಿತ್ರವ|
ಪರಮ ಪೂಜೆಯ ಗೈವುದೂ||೨||

ಜಾಹೀರಾತು
ಜಾಹೀರಾತು
ಜಾಹೀರಾತು

ನೀ ದಯದಿ ಸ್ವೀಕರಿಸೆನುತ ನೈ |ವೇದ್ಯ ಮಾಡಿಯೆ ಪ್ರಾರ್ಥಿಸೇ||
ಆ ದಯಾನಿಧಿಯಾ ಕಥಾಶ್ರವ| ಣವನು ಮಾಳ್ವರು ಲಾಲಿಸೀ||
ಸತ್ಕರಿಸಿ ಸರ್ವರನು ದ್ವಿಜರ ಸುವಾಸಿನಿಯರನು ಪೂಜಿಸೀ||
ನೃತ್ಯ ಗೀತದಿ ಮಂಗಳಾರತಿ ಮಾಡಿ ಪೂಜೆಯ ಸಲ್ಲಿಸೀ||
ಭಕ್ತಿಯಿಂದ ಪ್ರಸಾದ ವಿತ್ತುಣಿ ಸುತ್ತಲಿರುಳು ವಿನೋದದೀ||
ಸುಬ್ರಹ್ಮಣ್ಯ ಸ್ಮರಿಸಿ ಜಾಗರ ವಿದ್ದರಾಯಿತು ಮೋದದೀ||
ಮಾಡು ವ್ರತವನು ಕ್ಷೇತ್ರದಿ|
ಮಾಡು ವ್ರತವನು ಸಾಂಗದಿ||

ಜಾಹೀರಾತು
ಜಾಹೀರಾತು
ಜಾಹೀರಾತು

ಆಲಿಸಿರಿ ಜಗದೊಳಗೆ ಸರ್ವರು|
ಲೀಲೆಯೊಳು ಷಷ್ಠೀ ವ್ರತವನು|
ಕೇಳಿದರು ನೋಡಿದರು ಸಹಕರಿಸಿದರು ಧರಣಿಯಲಿ||೧||
ಮೇಲೆನಿಪ ಸಿರಿಸುಖವ ಹೊಂದುತ|
ಕೀಳೆನಿಪ ರುಜೆಯಿರಲು ತಕ್ಷಣ|
ಬೀಳುಗಳೆಯುತ ಮೋಕ್ಷ ಪಡೆವರು ಗುಹನ ಕರುಣದಲಿ||೨||

Leave a Response