ಮಂಗಳೂರು : ಕೇಂದ್ರದ ರಕ್ಷಣಾ ಸಚಿವರಾಗಿ, ಗೋವಾದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಮನೋಹರ ಪರಿಕ್ಕರ್ ದೇಶ ಕಂಡ ಆದರ್ಶ ನಾಯಕ. ಅವರ ಅಗಲಿಕೆಯಿಂದ ದೇಶಕ್ಕೆ ಅಪಾರ ನಷ್ಟವಾಗಿದೆ ಎಂದು ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದರೂ ಅದನ್ನು ಲೆಕ್ಕಿಸದೆ ಜೀವನದ ಕೊನೆ ಉಸಿರಿನ ಜನಸೇವೆ ಮಾಡಿದ ಪರಿಕ್ಕರ್ ಅವರನ್ನು ದೇಶದ ಜನತೆ ಎಂದೂ ಮರೆಯುವಂತಿಲ್ಲ. ಅವರ ಹೋರಾಟ, ಜನಸೇವೆ, ದೇಶಪ್ರೇಮ ಸದಾ ನಮಗೆ ಪ್ರೇರಣೆಯಾಗಿರುತ್ತದೆ ಎಂದು ಸಂಸದರು ಸಂತಾಪದಲ್ಲಿ ತಿಳಿಸಿದ್ದಾರೆ.