Recent Posts

Sunday, January 19, 2025
ಸುದ್ದಿ

ಸಿದ್ಧರಾಮಯ್ಯರೇ ಸಾಕ್ಷಿ ಇಲ್ಲಿದೆ, ಪೂಜಾ ಸಾವಿಗೆ ನೇರ ಸರಕಾರವೇ ಹೊಣೆ | ಪೂಜಾ ಕುಟುಂಬಕ್ಕೆ ಹತ್ತುಸಾವಿರ ಸಹಾಯಧನ – ಆಶೋಕ್ ರೈ

ಪುತ್ತೂರು : ಸರಕಾರದ ನಿರ್ಲಕ್ಷ್ಯಕ್ಕೆ ಪುತ್ತೂರು ವಿವೇಕಾನಂದ ವಿದ್ಯಾಲಯದ ದ್ವಿತೀಯ ವರ್ಷದ ಬಿ.ಕಾಂ. ವಿದ್ಯಾರ್ಥಿ ಪೂಜಾ ನಿಧನಹೊಂದಿದ್ದರು, ಇಂದು ಮೃತ ವಿದ್ಯಾರ್ಥಿನಿ ಮನೆಗೆ ಬೇಟಿ ನೀಡಿದ ಬಿ.ಜೆ.ಪಿ. ಜಿಲ್ಲಾ ಕಾರ್ಯಕಾರಣಿ ಸಮಿತಿ ಸದಸ್ಯ, ಪುತ್ತೂರಿನ ಅಶೋಕ್ ರೈ ,ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ ಹತ್ತು ಸಾವಿರ ರೂಪಾಯಿ ಪರಿಹಾರ ಧನದ ಚಕ್ಕನ್ನು ನೀಡಿದರು. ಕುಟುಂಬಸ್ಥರ ನೋವನ್ನು ಆಲಿಸಿದ ನಂತರ ಕಹಳೆ ನ್ಯೂಸ್ ಜೊತೆ ಮಾತನಾಡಿದ ರೈ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಿ.ಎಂ. ಹೇಳಿಕೆಗೆ ಟಾಂಗ್ ನೀಡಿದ ರೈ ಸಿದ್ದರಾಮಯ್ಯರಿಗೆ ಸಾಕ್ಷಿ ಇಲ್ಲಿದೆ, ಏನು ಕ್ರಮ ತೆಗೆದುಕೊಳ್ಳುತ್ತೀರಿ ಎಂದು ಪ್ರಶ್ನಿಸಿದರು. ವಿದ್ಯಾರ್ಥಿನಿ ಸಾವಿಗೆ ನೇರವಾಗಿ ಸರಕಾರದ ಅಸಮರ್ಪಕ ಕಾನೂನು ಕಾರಣ, ಕಾನೂನು ರೂಪಿಸುವ ಮೊದಲು ಸರಕಾರ ವೈದ್ಯರನ್ನು ವಿಶ್ವಸಕ್ಕೆ ತೆಗೆದುಕೊಳ್ಳುವ ಕಾರ್ಯವನ್ನು ಮಾಡಬೇಕಿತ್ತು. ಸಿದ್ಧರಾಮಯ್ಯನವರು ನಿದ್ದೆ ಮಾಡುವುದನ್ನು ಬಿಟ್ಟು ಸ್ವಲ್ಪ ಬುದ್ಧಿ ಉಪಯೋಗಿಸಿ ಯೋಚಿಸಿ ಕಾನೂನು ರೂಪಿಸಲಿ, ಪುತ್ತೂರಿನ ಶಾಸಕಿ ಶಕುಂತಲಾ ಶೆಟ್ಟಿಯವರು ಯಾವುದೇ ಸ್ಪಂದನೆ ನೀಡದಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response