Wednesday, January 22, 2025
ಸುದ್ದಿ

ಮಾರುತಿ ಸುಝುಕಿ ಕಂಪನಿಯು ಮಾರ್ಚ್ ತಿಂಗಳಲ್ಲಿ ಶೇ. 27 ಉತ್ಪಾದನೆ ಕಡಿತ: ಸುಜುಕಿ ಅಧ್ಯಕ್ಷ ಆರ್.ಸಿ. ಭಾರ್ಗವ – ಕಹಳೆ ನ್ಯೂಸ್

ದೇಶದ ಪ್ರಮುಖ ಕಾರು ತಯಾರಕ ಸಂಸ್ಥೆ ಮಾರುತಿ ಸುಝುಕಿ ಕಂಪನಿಯು ಮಾರ್ಚ್ ತಿಂಗಳಲ್ಲಿ ಸುಮಾರು ಶೇ. 27 ಉತ್ಪಾದನೆಯನ್ನು ಕಡಿತಗೊಳಿಸಿದೆ ಎಂದು ತಿಳಿಸಿದೆ. ಕಾರು ಮಾರುಕಟ್ಟೆಯಲ್ಲಿನ ನಿಧಾನಗತಿಯ ಬೇಡಿಕೆ ಮತ್ತು ಮುಂದಿನ ವರ್ಷದಿಂದ ಜಾರಿಗೆ ಬರುತ್ತಿರುವ ಕಠಿಣ ನಿಯಮಗಳ ಕಾರಣದಿಂದಾಗಿ ಕಾರು ಉತ್ಪಾದನೆಯ ಪ್ರಮಾಣವನ್ನು ಕಡಿತಗೊಳಿಸಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ಮಾರ್ಚ್ ತಿಂಗಳಿನಲ್ಲಿ ಮಾರುತಿ ಸುಝುಕಿ ತನ್ನ ಕಾರು ಉತ್ಪಾದನೆಯನ್ನು ಶೇ. 26.8 ದಿಂದ 126,000 ಯೂನಿಟ್ ಗಳಿಗೆ ಕಡಿತಗೊಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 172,000 ಯುನಿಟ್ ಗಳಷ್ಟು ಮಾರಾಟವಾಗಿದ್ದವು ಎಂದು ವರದಿ ತಿಳಿಸಿದೆ.ಈ ವರ್ಷದ ಮೇ ತಿಂಗಳಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಮಾರುಕಟ್ಟೆಯಲ್ಲಿ ಕಾರು ಬೇಡಿಕೆಯ ಮೇಲಿನ ಅನಿಶ್ಚಿತತೆ ನಡುವೆ ಪ್ರಮುಖ ಕಂಪನಿಗಳು ಉತ್ಪಾದನೆಯನ್ನು ಕಡಿತಗೊಳಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಠಿಣ BS-VI ನಿಯಮಗಳಿಗೆ ಬದಲಾಗುವಂತೆ ಸಂಸ್ಥೆಗಳು ಕಾರ್ಯಪ್ರವೃತ್ತವಾಗಿದ್ದು, ಏಪ್ರಿಲ್ 1, 2020 ರಿಂದ ಹೊಸ ನಿಯಮ ಜಾರಿಗೆ ಬರಲಿದೆ ಎಂದು ವರದಿ ಹೇಳಿದೆ.ಅಧಿಕ ಪ್ರಮಾಣದ ಬಡ್ಡಿದರಗಳು, ಹೆಚ್ಚಿದ ವಿಮೆ ವೆಚ್ಚ ಮತ್ತು ಏರಿದ ಇಂಧನ ಬೆಲೆಗಳು ಹಾಗು ಕೆಳಮಟ್ಟದ ಪರಿಷ್ಕರಣೆಯ ಕಾರಣದಿಂದಾಗಿ ವರ್ಷದ ದ್ವಿತೀಯಾರ್ಧದಲ್ಲಿ ಕಡಿಮೆ ಬೇಡಿಕೆಯಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಡಿಸೆಂಬರ್ 2019 ರ ಹೊತ್ತಿಗೆ ಬಿಎಸ್-VI ಹೊರಸೂಸುವಿಕೆ ನಿಯಮಗಳ ಪರಿವರ್ತನೆಗಾಗಿ ಕಂಪನಿಯು ತನ್ನ ಬಿಎಸ್-4 ಮಾಡೆಲ್ಗಳನ್ನು ಉತ್ಪಾದಿಸುವುದನ್ನು ನಿಲ್ಲಿಸಲಿದೆ ಎಂದು ಮಾರುತಿ ಸುಜುಕಿ ಅಧ್ಯಕ್ಷ ಆರ್.ಸಿ. ಭಾರ್ಗವ ಹೇಳಿದ್ದಾರೆ.