ಸಾಮಾಜಿಕ ಕಳಕಳಿಯ ವೈದ್ಯ ; ಭಜನೆಯಿಂದ ವಿಭಜನೆಯಿಲ್ಲ ಎಂದ ಮಹಾನ್ ದೈವ ಭಕ್ತ ಇಳಂತಿಲದ ಡಾ.ಭೀಮ್ ಭಟ್ ಇನ್ನಿಲ್ಲ – ಕಹಳೆ ನ್ಯೂಸ್
ಇಳಂತಿಲ : ಸಾಮಾಜಿಕ ಕಳಕಳಿಯೊಂದಿಗೆ ಇಳಿವಯಸ್ಸಿನವರೆಗೂ ವೈಧ್ಯಕೀಯ ವೃತ್ತಿಯನ್ನು ನಿಷ್ಠೆಯಿಂದ ಮಾಡಿದ ಹೆಮ್ಮೆಯ ವೈದ್ಯ. ಪುತ್ತೂರಿನ ಪುರುಷರಕಟ್ಟೆಯಲ್ಲಿ ಹತ್ತಾರು ವರ್ಷಗಳಿಂದ ವೈದ್ಯರಾಗಿ ಬಡವರ ಪಾಲಿಗೆ ಸಂಜೀವಿನಿಯಾಗಿದ್ದರು.
ಭಜನೆಯ ಹರಿಕಾರ :
ತಮ್ಮ ಮನೆಯಲ್ಲಿ ಸತತ 24 ಗಂಟೆಗಳ ಕಾಲ ರಾಜ್ಯದ ಅನೇಕ ಭಾಗಗಳಿಂದ ಪ್ರಸಿದ್ಧ ಹತ್ತಾರು ತಂಡಗಳನ್ನು ಕರಿಸಿ ಸಾಮೂಹಿಕ ಭಜನೆಯನ್ನು ಮಾಡುವ ಮೂಲಕ ಇಳಂತಿಲ ಗ್ರಾಮದಲ್ಲಿ ಭಜನೆಯ ಕ್ರಾಂತಿ ಮಾಡಿದ ಮಹಾನ್ ಧೈವಭಕ್ತ ಡಾ. ಭೀಮ ಭಟ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಸಂಜೆ ಬೆಂಗಳೂರಿನ ತಮ್ಮ ಮಗನ ಮನೆಯಲ್ಲಿ ಇಹಲೋಕ ತ್ಯಜಿಸಿದರು.
ಇಂದು ರಾತ್ರಿ ತಮ್ಮ ಬೆಳ್ತಂಗಡಿ ತಾಲೂಕಿನ ಇಳಂತಿಲದ ಸ್ವಗ್ರಹದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.