ಮಾಲೆ: ದ್ವೀಪ ರಾಷ್ಟ್ರ ಮಾಲ್ಡಿವ್ಸ್ ಪ್ರವಾಸದಲ್ಲಿರುವ ವೀದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ನಿನ್ನೆ ಅಲ್ಲಿನ ಗೃಹಸಚಿವ ಇಮ್ರಾನ್ ಅಬ್ದುಲ್ಲಾ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ವಿಷಯಗಳ ಕುರಿತು ಮಹತ್ವದ ಸಮಾಲೋಚನೆ ನಡೆಸಿದರು.
ಎರಡು ದಿನಗಳ ಭೇಟಿಗಾಗಿ ನಿನ್ನೆ ರಾತ್ರಿ ರಾಜಧಾನಿ ಮಾಲೆಗೆ ಆಗಮಿಸಿದ ಅವರು, ಇಂದು ಗೃಹಸಚಿವ ಇಮ್ರಾನ್ ಅವರನ್ನು ಭೇಟಿ ಮಾಡಿ ಉಭಯದೇಶಗಳ ಬಾಂಧವ್ಯಗಳ ಬಲವರ್ಧನೆ ಕುರಿತು ಚರ್ಚಿಸಿದರು ಎಂದು ವೀದೇಶಾಂಗಳ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್‍ಕುಮಾರ್ ಟ್ವಿಟ್ವರ್‍ನಲ್ಲಿ ತಿಳಿಸಿದ್ದಾರೆ.
ದ್ವೀಪ ರಾಷ್ಟ್ರದ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ಮಹಮದ್ ಸೋಲಿ ಅವರು ಕಳೆದ ವರ್ಷ ನವೆಂಬರ್‍ನಲ್ಲಿ ಅಧಿಕಾರ ಸ್ವೀಕರಿಸದ ಬಳಿಕ ಇದು ಭಾರತದ ಪ್ರಪ್ರಥಮ ಪೂರ್ಣಪ್ರಮಾಣದ ಮಾಲ್ಡಿವ್ಸ್ ಭೇಟಿಯಾಗಿದೆ.
ನಾಳೆ ಸುಷ್ಮಾ ವೀದೇಶಾಂಗ ಸಚಿವರ ಮತ್ತು ಅಧ್ಯಕ್ಷರನ್ನು ಭೇಟಿ ಮಾಡಿ ಎರಡು ದೇಶಗಳ ಸಂಬಂಧ ವೃದ್ಧಿ ಕುರಿತು ವ್ಯಾಪಕ ಸಮಾಲೋಚನೆ ನಡೆಸುವರು.