Tuesday, January 21, 2025
ಸುದ್ದಿ

ಬಣ್ಣದ ಆಟಕ್ಕೆ ತಯಾರಾದ ಬನಹಟ್ಟಿ ನಗರ – ಕಹಳೆ ನ್ಯೂಸ್

ಬನಹಟ್ಟಿ: ರಂಗು ರಂಗಿನ ಆಟ ಹೋಳಿಹಬ್ಬದ ಒಂದು ವಾರದ ಮುನ್ನವೇ ನಗರದ ಮಂಗಳವಾರ ಪೇಟೆಯ ಮುಖ್ಯ ರಸ್ತೆಯಲ್ಲಿ ಬಣ್ಣದ ವ್ಯಾಪಾರ ಭರ್ಜರಿಯಾಗಿ ನಡೆದಿದೆ.
ವಿವಿಧ ರಂಗಿನ ಬಣ್ಣಗಳ ಪಿಚಕಾರಿಗಳು, ಬಣ್ಣದ ಕುದಲಿನಾಕಾರದ ಪೋಷಾಕುಗಳು, ಬಗೆ ಬಗೆಯ ಮಾಸ್ಕಗಳ ಖರೀದಿಸಲು ಜನರು ಮುಗಿಬಿಳುವ ದೃಶ್ಯ ಎಲ್ಲೆಡೆ ಸರ್ವೇ ಸಾಮಾನ್ಯವಾಗಿತು ಜೋತೆಗೆ ವಿವಿಧ ಆಕಾರಗಳ ಮಾಸ್ಕಗಳು ಈ ಬಾರಿ ಆಕರ್ಷಣೆಯ ವಸ್ತುಗಳಾಗಿವೆ.

ಅದೇ ರೀತಿ ಸುಮಾರು ಏಳು ಎಂಟು ದಿನಗಳಿಂದ ಮಾರಾಟವಾಗುತ್ತಿರುವ ಚರ್ಮದ ಹಾಗೂ ಪ್ಲಾಸ್ಟಿಕ್ ಹಾಳೆ ಉಪಯೋಗಿಸಿ ತಯಾರಿಸಿದ ಹಲಗೆಗಳನ್ನು ಕೊಳ್ಳುವವರ ಸಂಖ್ಯೆ, ಬಣ್ಣದೋಕುಳಿ ಆಡಿ ಹಲಗೆ ಬಾರಿಸುವ ಮಕ್ಕಳ ಸಂತೋಷ ಸಡಗರದಲ್ಲಿ ವ್ಯಾಪಾರ ಜೋರಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಕ್ಕಳು ಹಲಗೆ ಬಾರಿಸುತ್ತ ಕಾಮಣ್ಣನ ಕರಿದಿಗೆ ಹಣ ಸಂಗ್ರಹಿಸಲು ಹಲಗೆ ಬಾರಿಸುತ್ತ ಸಂತೋಷ ಸಡಗರದಲ್ಲಿ ಇರುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿದೆ.

ನಗರದ ಮಂಗಳವಾರ ಪೇಟೆ, ಶನಿವಾರ ಪೇಟೆ, ಲಕ್ಷ್ಮೀ ನಗರ ಮುಂತಾದವುಗಳಲ್ಲಿ ವಿವಿಧೆಡೆ ರತಿ-ಕಾಮಣ್ಣರ ಮೂರ್ತಿ ಪ್ರತಿಷ್ಟಾಪನೆಯ ತಯಾರಿ ಜೋರಾಗಿದೆ ವಿವಿದ ಕಾರ್ಯಕ್ರಮಗಳು ಬರದಿಂದ ಸಾಗಿವೆ ಒಟ್ಟು ನೂರಕ್ಕು ಹೆಚ್ಚು ಕಡೆಗಳಲ್ಲಿ ಕಾಮದಹನ ನಡೆಯಲಿದೆ.

ಇದೇ 20,ಬುಧವಾರ ದಿನ ಹೊಳಿ ಹುಣ್ಣಿಮೆ. 21, ಗುರುವಾರ ಕರಿ. 22, ಶುಕ್ರವಾರ ಬ್ಯಾಟಿ ಇರುತ್ತದೆ ಎಂದು ನಗರದ ಗಣ್ಯರು ತಿಳಿಸಿದ್ದಾರೆ.

ನಗರದ ಬಣ್ಣದ ವ್ಯಾಪಾರಿಗಳಾದ ಅಶೋಕ ಮಹಾಜನ ಹಾಗೂ ಭೀಮು ರಾವಳ ಮಾತನಾಡಿ ನಾವು ಎಂಟು-ಹತ್ತು ವರ್ಷ ಗಳಿಂದಾ ಬಣ್ಣದ ವ್ಯಾಪಾರ ಮಾಡುತ್ತಿದ್ದು 15 ಬಗೆಯ ಪಾವುಡರ್ ಬಣ್ಣ ಮಾರಾಟ ಮಾಡುತ್ತೆವೆ. ಇದು ಯಾವುದೆ ಅಪಾಯಕಾರಿಯಾಗಿಲ್ಲಾ ಮತ್ತು ಮುಖವಾಡ, ಪಿಚಕಾರಿ, ಮಕ್ಕಳ ವಿವಿಧ ಆಕರ್ಷಣೆಯ ಪೋಷಾಕುಗಳು ಮಾರಾಟ ಮಾಡುತ್ತೆವೆ ವ್ಯಾಪಾರ ಜೋರಾಗಿದೆ ಎಂದು ತಿಳಿಸಿದರು.

ಗ್ರಾಹಕಿ ಗೌರಮ್ಮ ನವರು ಮಾತನಾಡಿ ನಾವು ಇಲ್ಲಿ ಪ್ರತಿವರ್ಷ ಬಣ್ಣವನ್ನು ಕರಿದಿ ಮಾಡುತಿದ್ದೆವೆ ಪುಡಿಬಣ್ಣ ಯಾವುದೆ ಅಪಾಯಕಾರಿಯಾಗಿರುವುದಿಲ್ಲಾ ನಮ್ಮ ಮಕ್ಕಳ್ಳನ್ನು ಕರೆದುಕೊಂಡು ಬಂದು ಕರಿದಿಮಾಡಿ ಸಂಭ್ರಮವಾಗಿ ಹೊಳ್ಳಿ ಹಬ್ಬ ಆಚರಿಸುತ್ತೆವೆ ಎಂದು ತಿಳಿಸಿದರು.

ಒಟ್ಟಾರೆ ನಗರದ ಎಲ್ಲೆಲಿವು ಹೊಳಿ ಹಬ್ಬದ ಆಚರಣೆಯು ಸಡಗರ, ಸಂಭ್ರಮ, ಅಬ್ಬರದಿಂದ ನಡೆದಿದೆ ಶಾಂತತೆ ಕಾಪಾಡಲು ಪೋಲಿಸ್ ಬಂದೋಬಸ್ತ ಒದಗಿಸಲಾಗಿದೆ.