ಸುಬ್ರಹ್ಮಣ್ಯ: ಪ್ರಕೃತಿ ನಾಶ ಮನುಷ್ಯನಿಂದ ಮರ ಗಿಡಗಳ ಕಗ್ಗೊಲೆ. ನಾನು ಕಂಡ ಒಂದು ಚಿತ್ರ ನನ್ನನ್ನು ತುಂಬಾ ಆಕರ್ಷಿಸಿತು. ಈ ಸಮಾಜಕ್ಕೆ ಒಂದು ಸಂದೇಶ ಕೊಡಬೇಕು ಅನ್ನೊ ಹಂಬಲ ಅತಿಯಾಯಿತು.
ನಾವು ದಿನನಿತ್ಯ ನೋಡುತ್ತಿದ್ದೇವೆ ಅನುಭವಿಸುತ್ತಿದ್ದೇವೆ. ಅದೇನೆಂದರೆ ಶೆಕೆ ಶೆಕೆ ದಿನದಿಂದ ದಿನಕ್ಕೆ ಉಷ್ಣಾಂಶ ಏರುತ್ತಲೇ ಇದೇ, ವಾರದಲ್ಲಿ ಒಮ್ಮೆಯಾದರು ಕಾಡಿಗೆ ಬೆಂಕಿ ಕಾಡ್ಗಿಚ್ಚು . ಮಳೆಗಾಲದಲ್ಲಿ ಅತಿ ವೃಷ್ಟಿ. ಅಲ್ಲಿ ಕುಸಿತ ಇಲ್ಲಿ ಕುಸಿತ ಎಂಬೆಲ್ಲ ವಿಚಾರಗಳನ್ನ ಕೇಳುತ್ತಲೆ ಇದ್ದೇವೆ.
ಇದಕ್ಕೆ ಏನೂ ಕಾರಣ ಇರಬಹುದು? ಯಾಕೆ ಹೀಗಾಗುತ್ತಿದೆ? ನನಗೆ ಅನಿಸಿದಂತೆ ಇವೆಲ್ಲ ನಮ್ಮಿಂದಲೇ ಆದಂತ ತಪ್ಪು ಅಂತ.
ಎಲ್ಲಿ ನೋಡಿದರು ಜೆಸಿಬಿಯಲ್ಲಿ ಮರ ಗಿಡಗಳನ್ನು ನಾಶಮಾಡುವುದು, ಇನ್ನೊಂದೆಡೆ ಈ ಭೂಮಿಯಲ್ಲಿ ಕೊಳವೆ ಬಾವಿತೊಡುವುದು , ಅದೇ ರೀತಿ ವಾಹನ ದಟ್ಟಣೆ ಹಾಗು ಹೊಗೆ ಕಾರುವ ಕಾರ್ಖಾನೆ, ಎಲ್ಲಿ ನೋಡಿದರು ಆಮ್ಲಜನಕದ ಕೊರತೆ !
ಇದೇ ರೀತಿ ಪರಿಸರ ಮಾಲಿನ್ಯ ಮಾಡುತ್ತಾನೆ ಇದ್ದೇವೆ ಹೊರತು, ನಾಶ ಹೊಂದಿದ ಪ್ರಮಾಣದಲ್ಲಿ ಪ್ರಕೃತಿಯನ್ನು ಬೆಳೆಸುವ ಕಾರ್ಯ ಮಾಡುತ್ತಿಲ್ಲ. ಆದ್ದರಿಂದ ಪ್ರಕೃತಿಸಮತೋಲನ ಕಳೆದುಕೊಂಡು ಈ ರೀತಿ ದುರಂತ ಸಂಭವಿಸುತ್ತಿದೆ ಎಂಬುದು ನನ್ನ ಅನಿಸಿಕೆ ಹಾಗು ಅಭಿಪ್ರಾಯ.
ಆದಷ್ಟು ಜನರು ಎಚ್ಚೆತ್ತುಕೊಂಡು ಗಿಡ ನೆಡಿ ಪರಿಸರ ಪ್ರಕೃತಿಯನ್ನು ರಕ್ಷಿಸಿ ಇಲ್ಲದೆ ಹೋದಲ್ಲಿ ಈ ಚಿತ್ರ ಸರಿಯಾಗಿ ಗಮನಿಸಿ ಮುಂದೊಂದು ದಿನ ಇದೇ ರೀತಿ ಮಡಿಕೆಯಲ್ಲಿ ಆಕ್ಸಿಜನ್ ಸೇವಿಸುವ ರೀತಿ ನಮ್ಮ ಪಾಡಾಗಬಹುದು!!
ವರದಿ: ಶಿವ ಭಟ್ ಕಹಳೆ ನ್ಯೂಸ್