Recent Posts

Monday, January 20, 2025
ಸುದ್ದಿ

ಮಧ್ಯ ಪ್ರದೇಶದಲ್ಲಿ ಹಸುಗಳನ್ನು ಹುಲ್ಲು ಮೇಯಿಸುವುದಕ್ಕೆ ತರಬೇತಿ – ಕಹಳೆ ನ್ಯೂಸ್

ಮಧ್ಯ ಪ್ರದೇಶದಲ್ಲಿ 15 ವರ್ಷಗಳ ನಂತರ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ‘ಮುಖ್ಯಮಂತ್ರಿ ಯವ ಸ್ವಾಭಿಮಾನ್’ ಎಂಬ ಹೊಸ ಯೋಜನೆಯನ್ನು ಆರಂಭಿಸಿದೆ.

ಈ ಯೋಜನೆಯಡಿಯಲ್ಲಿ 90 ದಿನಗಳ ಕೌಶಲಾಭಿವೃದ್ಧಿ ತರಬೇತಿಯನ್ನು ನೀಡಲಾಗುತ್ತದೆ. ನಿರುದ್ಯೋಗ ಯುವಕ ಯುವತಿಯರಿಗೆ ಹಸುಗಳನ್ನು ಹುಲ್ಲು ಮೇಯಿಸುವ, ಬ್ಯೂಟಿ ಪಾರ್ಲರ್ ತರಬೇತಿ, ಮದುವೆಗಳಲ್ಲಿ ವಾದ್ಯ ನುಡಿಸುವುದು ಸೇರಿದಂತೆ ಒಟ್ಟು 43 ವಿಭಿನ್ನ ಕೆಲಸಗಳಿಗೆ ತರಬೇತಿ ನೀಡಲು ಕಮಲ್‌ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಇಲ್ಲಿ ಸಮರ್ಪಕವಾಗಿ ಆಯಾಯ ವಿಷಯಗಳಿಗನುಗುಣವಾಗಿ ತರಬೇತಿಯನ್ನು ನಿಡುತ್ತಿಲ್ಲ, ಅದಕ್ಕೆ ಉದಾಹರಣೆ ಎಂಬಂತೆ ಈ ಯೋಜನೆಯಡಿ ಡ್ರೈವಿಂಗ್ ಕಲಿಯಲು ವಿಕಾಸ್ ಗೋರೆ ಎಂಬ ಯುವಕ ಅರ್ಜಿ ಸಲ್ಲಿಸಿದ್ದ. ಆದರೆ ಅಲ್ಲಿ ಟೈಲರಿಂಗ್ ಮತ್ತು ಬ್ಯೂಟಿಷನ್ ತರಬೇತಿ ನೀಡುತ್ತಾರೆ ಎಂದು ತಮ್ಮ ಅಳಲನ್ನು ವ್ಯಕ್ತಪಡಿಸುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು