ಪುಲ್ವಾಮದಲ್ಲಿ ಫೆ.14 ರಂದು ಉಗ್ರರ ದಾಳಿ ನಡೆದ ಹಿನ್ನಲೆ ಭಾರತದ ರೈತರು ಪಾಕಿಸ್ತಾನಕ್ಕೆ ನಾವು ತರಕಾರಿಗಳನ್ನು ರಫ್ತು ಮಾಡುವುದಿಲ್ಲ ಎಂದು ದೃಢ ನಿರ್ಧಾರ ಕೈಗೊಂಡಿದ್ದರು. ಇದರ ಪರಿಣಾಮ ದಿನೇ ದಿನೇ ಏರಿಕೆಯಾಗುತ್ತಿದ್ದ ಟೊಮೇಟೋ ದರ ಈಗ ಭಾರೀ ಏರಿಕೆಯಾಗಿದೆ.
2018ರಲ್ಲಿ 1 ಕೆಜಿ ಹಸಿರು ಮೆಣಸಿನಕಾಯಿ 100 ಪಾಕಿಸ್ತಾನ ರೂ. ಗಿಂತ ಕಡಿಮೆ ದರ ಇತ್ತು. ಆದರೆ ಈಗ ಒಂದೇ ತಿಂಗಳಿನಲ್ಲಿ ಬೆಲೆ 400 ಪಾಕಿಸ್ತಾನ ರೂ. ದಾಟಿದೆ. ದುಬಾರಿ ಬೆಲೆ ನೋಡಿ ತರಕಾರಿಗಳನ್ನು ಖರೀದಿಸಲಾಗದ ವ್ಯಾಪಾರಿಗಳು ಅಂಗಡಿಗಳನ್ನು ಮುಚ್ಚಿದ್ದಾರೆ. ಟೊಮೆಟೋ ಮತ್ತು ಮೆಣಸಿನಕಾಯಿಯನ್ನು ಮಾರಾಟ ಮಾಡದ ವ್ಯಾಪಾರಿಗಳ ಮೇಲೆ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ದಂಡ ಹಾಕಿದೆ.