Sunday, November 17, 2024
ಸುದ್ದಿ

ಮೃತ ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿ, ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದ ಕಾಂಗ್ರೆಸ್ ಸದಸ್ಯರು | ಇದು ಕಹಳೆ ನ್ಯೂಸ್ ಇಂಪ್ಯಾಟ್!

ಪುತ್ತೂರು : ಕಳೆದೆರಡು ದಿನಗಳ ಹಿಂದೆ ಡಾಕ್ಟರ್ ಗಳ ಮುಷ್ಕರ ಸಂದರ್ಭದಲ್ಲಿ ಸರಿಯಾದ ಚಿಕಿತ್ಸೆ ಲಭಿಸದೆ ಮೃತಪಟ್ಟ ವಿವೇಕಾನಂದ ಕಾಲೇಜು ವಿದ್ಯಾರ್ಥಿನಿ ಪೂಜಾ ಕುಟುಂಬಸ್ಥರು ಈಗಾಗಲೇ ಅನೇಕ ಭಾರಿ ಪೂಜಾ ಕಾಯಿಲೆ ಬಗ್ಗೆ ಮನವಿ ನೀಡಿದ್ದರು ಶಾಸಕಿ ಯಾವುದೇ ಸ್ಪಂದನೆ ನೀಡಿರಲಿಲ್ಲ ಎಂಬ ಪೂಜಾ ತಾಯಿ ಗೀತ ಅವರ ಹೇಳಿಕೆಯನ್ನು ಕಹಳೆ ನ್ಯೂಸ್ ವರದಿ ಮಾಡಿತ್ತು, ಅದು ಸಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿತ್ತು. ಈ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ ಶಾಸಕಿ ಶಕುಂತಲಾ ಶೆಟ್ಟಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸದಸ್ಯರನ್ನು ಮತ್ತು ಸ್ಥಳೀಯ ಕಾರ್ಯಕರ್ತರನ್ನು ಪೂಜಾ ಮನೆಗೆ ಕಳುಹಿಸಿವುವ ಕೆಲಸ ಮಾಡಿದ್ದಾರೆ.

ಶಾಸಕಿಯವರು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಇರುವ ಹಿನ್ನಲೆಯಲ್ಲಿ ಬೇಟಿನೀಡಲು ಅಸಾಧ್ಯವಾಗಿದೆ, ಬೆಳಗಾವಿಯಿಂದ ಬಂದ ತಕ್ಷಣ ಮನೆಗೆ ಭೇಟಿ ನೀಡುತ್ತೇನೆ ಎಂದು ಕಹಳೆ ನ್ಯೂಸ್ ಗೆ ಹೇಳಿಕೆ ನೀಡಿದ್ದು, ಇಂದು ಮೃತಳ ಮನೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹಮ್ಮದ್ ಬಡಗನ್ನೂರು, ನಗರ ಸಭಾ ನಾಮನಿರ್ದೇಶಿತ ಸದಸ್ಯ ದಿಲೀಪ್ ಮೊಟ್ಟೆತ್ತಡ್ಕ, ಬ್ಲಾಕ್ ಕಾಂಗ್ರೆಸ್ ಸದಸ್ಯ ರೋಷನ್ ರೈ, ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಭೇಟಿ ನೀಡಿ, ಸಾಂತ್ವನ ಹೇಳಿ, ಮೃತ ವಿದ್ಯಾರ್ಥಿನಿಯ ಅಕ್ಕನಿಗೆ ಉದ್ಯೋಗ ಕಲ್ಪಿಸುವ ಭರವನೆಯನ್ನು ನೀಡಿದ್ದು, ಶಾಸಕಿಯರೊಂದಿಗೆ ಮಾತನಾಡಿ ಸರಕಾರದಿಂದ ಸೂಕ್ತ ಪರಿಯಾರ ಕೊಡಿಸಿ, ಅವರ ಸಮಸ್ಯೆಗೆ ಸ್ಪಂದಿಸುವ ಭರವನೆಯನ್ನು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದು ಕೇವಲ ರಾಜಕೀಯ ಭೇಟಿಯಾಗದೆ, ಮೃತಳ ಕುಟುಂಬಕ್ಕೆ ಸೂಕ್ತ ಪರಿಹಾರ ಲಭಿಸುವಂತಾಗಲಿ ಎಂಬುದು ಗ್ರಾಮಸ್ಥರ ಆಶಯ.

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response