ನವದೆಹಲಿ: ನಿರಂತರ ತಾಂತ್ರಿಕ ದೋಷಗಳಿಂದಾಗಿ ವಿಮಾನಯಾನಗಳು ರದ್ದುಗೊಂಡು ಅಪಖ್ಯಾತಿಗೆ ಗುರಿಯಾಗಿರುವ ದೇಶದ ಪ್ರತಿಷ್ಠಿತ ಏರ್‍ಲೈನ್ಸ್ ಸಂಸ್ಥೆಯಾದ ಜೆಟ್‍ಏರ್‍ವೇಸ್ ಈಗ ಗಂಡಾಂತರದಲ್ಲಿದೆ.
ತಮಗೆ ಸಂಸ್ಥೆಯು ಮೂರು ತಿಂಗಳಿನಿಂದ ವೇತನ ಪಾವತಿಸಿಲ್ಲ. ಈ ವಿಮಾನದ ಕಾರ್ಯನಿರ್ವಹಣೆ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ಆರೋಪಿಸಿ ಜೆಟ್ ಏರ್‍ವೇಸ್‍ನ ವಿಮಾನಗಳ ನಿರ್ವಹಣೆ ಇಂಜಿನಿಯರ್‍ಗಳ ಸಂಘ ಕೇಂದ್ರ ಸರ್ಕಾರದ ಮೊರೆ ಹೋಗಿದೆ.
ಈ ಸಂಬಂಧ ಸಂಘವು ವಿಮಾನಯಾನ ಸುರಕ್ಷಿತ ಪ್ರಾಧಿಕಾರಕ್ಕೆ ಪತ್ರ ಬರೆದು ತಮಗೆ ಮೂರು ತಿಂಗಳಿನಿಂದ ಸಂಸ್ಥೆ ವೇತನ ಪಾವತಿಸಿಲ್ಲ. ಜೆಟ್ ಏರ್‍ವೇಸ್ ವಿಮಾನಗಳು ಸೂಕ್ತ ತಾಂತ್ರಿಕ ನಿರ್ವಹಣೆಯ ಗಂಡಾಂತರದಲ್ಲಿದೆ ಎಂದು ತಿಳಿಸಿದ್ದಾರೆ.
ತುರ್ತು ಸಭೆಗೆ ಆದೇಶ:ಇದನ್ನು ಗಂಭೀರವಾಗಿ ಪರಿಗಣಿಸಿರುವ ನಾಗರಿಕ ವಿಮಾನಯಾನ ಸಚಿವ ಸುರೇಶ್‍ಪ್ರಭು, ವಿಮಾನಯಾನಗಳ ಕಾರ್ಯದರ್ಶಿಯವರಿಗೆ ಸೂಚನೆ ನೀಡಿ, ತಕ್ಷಣ ತುರ್ತು ಸಭೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದಾರೆ.