ಬೆಂಗಳೂರು: ನಾಳೆಯಿಂದ ಎಸ್.ಎಸ್.ಎಲ್.ಸಿ.ಪರೀಕ್ಷೆಗಳು ನಡೆಯಲಿದ್ದು, ಈ ಹಿನ್ನೆಲೆ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿಯನ್ನು ವಿಸ್ತರಿಸಲಾಗಿದೆ.
ಪರೀಕ್ಷೆ ಮುಗಿಯುವವರೆಗೂ ಹಳೆಯ ಬಸ್ ಪಾಸ್ ಅನ್ನು ಬಳಸಿ ಪ್ರಯಾಣ ಬೆಳೆಸಬಹುದು ಎಂದು ರಾಜ್ಯ ಸಾರಿಗೆ ಇಲಾಖೆ ಸೂಚಿಸಿದೆ.
ಬಸ್ ಪಾಸ್ ನ ಅವಧಿ ಮುಗಿದರೂ ಅದನ್ನು ನವೀಕರಿಸುವ ಅಗತ್ಯವಿಲ್ಲ. ಪರೀಕ್ಷೆ ಆರಂಭದಿಂದ ಅಂತ್ಯದವರೆಗೆ ಹಳೆಯ ಪಾಸ್ ಅನ್ನು ವಿದ್ಯಾರ್ಥಿಗಳು ಬಳಸಬಹುದು ಎಂದು ಸರ್ಕಾರ ಹೇಳಿದೆ.