ಬಂಟ್ವಾಳ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶವಾದ ಬಿಸಿರೋಡ್ ಪೇಟೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹಾಗೂ ಕಾನೂನು ಸುವ್ಯವಸ್ಥೆಯ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಬಂಟ್ವಾಳ ವೃತ್ತ ಪೋಲೀಸ್ ಸಿಬ್ಬಂದಿಗಳು ಹಾಗೂ ಸಿ.ಆರ್.ಪಿ.ಎಪ್ ಪೋಲೀಸರಿಂದ ರೂಟ್ ಮಾರ್ಚ್ ನಡೆಯಿತು.
ಬಂಟ್ವಾಳ ಉಪವಿಭಾಗದ ಎ.ಎಸ್.ಪಿ.ಸೈದುಲು ಅಡಾವತ್, ಸಿ.ಆರ್.ಪಿ.ಎಪ್. ಸಹಾಯಕ ಕಮಾಂಡೆಂಟ್ ಮಾರುತಿ, ಬಂಟ್ವಾಳ ವ್ರತ್ತ ನಿರೀಕ್ಷಕ ಶರಣ್ ಗೌಡ, ಬಂಟ್ವಾಳ ನಗರ ಠಾಣಾ ಎಸ್.ಐ ಚಂದ್ರಶೇಖರ್ ಮತ್ತಿತರರು ರೂಟ್ ಮಾರ್ಚ್ ನಲ್ಲಿ ಪಾಲ್ಗೊಂಡಿದ್ದರು.