Wednesday, January 22, 2025
ಸುದ್ದಿ

ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಪಿಕ್‌ಅಪ್ ವಾಹನದ ಬ್ಯಾಟರಿ ಕಳವು ಇಬ್ಬರ ಬಂಧನ- ಕಹಳೆ ನ್ಯೂಸ್

ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುಲಶೇಖರ ಸೆಕ್ರೆಡ್ ಹಾರ್ಟ್ ಶಾಲೆಯ ಮುಂಭಾಗದ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಪಿಕ್‌ಅಪ್ ವಾಹನದ ಬ್ಯಾಟರಿಯನ್ನು ದಿನಾಂಕ: 12-03-219 ರಂದು ರಾತ್ರಿ ವೇಳೆಯಲ್ಲಿ ಕಳವು ಮಾಡಿ, ಪಿಕ್‌ಅಪ್ ವಾಹನದ ಇಂಜಿನ್‌ಗೆ ಉಪ್ಪನ್ನು ಹಾಕಿ ಸುಮಾರು 12,000/- ನಷ್ಟ ಉಂಟು ಮಾಡಿದ ಕುರಿತಂತೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ.

ಆರೋಪಿಗಳಿಂದ ಕಳವಾದ ಬ್ಯಾಟರಿ ಮೌಲ್ಯ ರೂ./- ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಕೊಳ್ಳಲಾಗಿರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆ.ವಿ.ಎಸ್. ಕ್ಯಾಶ್ಯೂ ಫ್ಯಾಕ್ಟರಿ ಬಳಿ, ಶಕ್ತಿನಗರ, ಪದವು ಗ್ರಾಮ, ಮಂಗಳೂರು ಇಲ್ಲಿನ ಕರಿಯಪ್ಪರ ಮಗ ರಾಜೇಶ್. ಬಜ್ಜೋಡಿ ಚರ್ಚ್ ಬಳಿ, ಬಿಕರ್ನಕಟ್ಟೆ, ಮರೋಳಿ ಗ್ರಾಮ, ಮಂಗಳೂರು ಇಲ್ಲಿನ ಪುಂಡಲೀಕ ಅವರ ಮಗ ಪ್ರಕಾಶ್ ದಸ್ತಗಿರಿ ಮಾಡಲಾದ ಆರೋಪಿಗಳು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪತ್ತೆ ಕಾರ್ಯಾಚರಣೆಯನ್ನು ಕಂಕನಾಡಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಜಗದೀಶ್ ಆರ್., ಕಾನೂನು ಸುವ್ಯವಸ್ಥೆಯ ಪೊಲೀಸ್ ಉಪ ನಿರೀಕ್ಷಕರಾದ ಪ್ರದೀಪ್ ಟಿ. ಆರ್. ಹಾಗೂ ಠಾಣಾ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.