ಮಂಗಳೂರು: ಪ್ರವಾಸಿ ಕೇಂದ್ರವಾದ ಮಂಗಳೂರಿಗೆ ವಿದೇಶಿ ಪ್ರವಾಸಿಗರು ಇತ್ತೀಚೆಗೆ ಸಾಕಷ್ಟು ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಮಂಗಳೂರಿನ ನವಮಂಗಳೂರು ಬಂದರಿಗೆ ಪ್ರವಾಸಿ ಹಡಗೊಂದು ಬಂದಿದ್ದು ವಿದೇಶಿ ಪ್ರವಾಸಿಗರು ಮಂಗಳೂರು ದರ್ಶನಕ್ಕೆ ಸಜ್ಜಾಗಿದ್ದಾರೆ.
ಕೋಸ್ಟ ನ್ಯೂರೋವಿಯಾರಿಯಾ ಎಂಬ ಇಟಲಿ ಹಡಗು ಮಂಗಳೂರಿಗೆ ಬಂದಿದ್ದು ಇದರಲ್ಲಿ 1099 ಪ್ರಯಾಣಿಕರು ವಿದೇಶದಿಂದ ಆಗಮಿಸಿದ್ದಾರೆ. ಪ್ರವಾಸಿಗರೊಂದಿಗೆ 562 ಹಡಗು ಸಿಬ್ಬಂದಿಗಳು ಬಂದಿದ್ದಾರೆ. ಮಾರ್ಚ್ 7 ಮತ್ತು 12 ರಂದು ಕೂಡ ಪ್ರವಾಸಿಗರ ಹಡಗು ನವಮಂಗಳೂರು ಬಂದರು ಮೂಲಕ ಮಂಗಳೂರಿಗೆ ಬಂದಿದ್ದು, ಇಂದು ಬಂದ ಹಡಗು ಈ ತಿಂಗಳಲ್ಲಿ ಮಂಗಳೂರಿಗೆ ಬರುತ್ತಿರುವ ಮೂರನೇ ಪ್ರವಾಸಿಗರ ಹಡಗಾಗಿದೆ.
ಮಾರ್ಚ್ 7 ರಂದು 1831 ಪ್ರವಾಸಿಗರು, 742 ಸಿಬ್ಬಂದಿಗಳು , ಮಾರ್ಚ್ 12 ರಂದು ಎರಡು ಹಡಗು ಬಂದಿದ್ದು ಅದರಲ್ಲಿ ಒಂದು ಹಡಗಿನಲ್ಲಿ 2524 ಪ್ರವಾಸಿಗರು, 985 ಸಿಬ್ಬಂದಿಗಳು, ಮತ್ತೊಂದು ಹಡಗಿನಲ್ಲಿ 2124 ಪ್ರವಾಸಿಗರು 950 ಸಿಬ್ಬಂದಿಗಳು ಆಗಮಿಸಿದ್ದರು.