ಮಂಗಳೂರು: ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರುತ್ತಾರೆ ಎಂಬ ವಿಚಾರವನ್ನು ಸಿಎಂ ಸಿದ್ದರಾಮಯ್ಯ ಸಂಪೂರ್ಣ ಅಲ್ಲಗಳೆದಿದ್ದಾರೆ.ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಪ್ರಮೋದ್ ಈ ಬಗ್ಗೆ ನೂರು ಸಾರಿ ಸ್ಪಷ್ಟನೆ ಕೊಟ್ಟಿದ್ದಾರೆ. ಆದ್ರೂ ಬಿಜೆಪಿಯವರು ಬೇಕೆಂದೇ ಇಂಥ ಹೇಳಿಕೆ ನೀಡಿ ಪ್ರಮೋದ್ ಇಮೇಜ್ ಹಾಳು ಮಾಡುತ್ತಿದ್ದಾರೆ. ಇದು ಮಧ್ವರಾಜ್ ತೇಜೋವಧೆ ಮಾಡುವ ಯತ್ನ ಅಂತಾ ದೂರಿದ್ರು.
ಅಲ್ಲದೆ, ಸ್ವತಃ ಪ್ರಮೋದ್ ಮಧ್ವರಾಜ್ ಅವರನ್ನೇ ಹತ್ತಿರಕ್ಕೆ ಕರೆದು ಸ್ಪಷ್ಟನೆ ಕೊಡುವಂತೆ ಹೇಳಿದ್ರು. ಸಿಎಂ ಮಾತಿಗೆ ಸಚಿವ ಪ್ರಮೋದ್ ಕೂಡ ದನಿಗೂಡಿಸಿದ್ರು.
ಸಂಸದ ನಳಿನ್ ಕುಮಾರ್ ಕಟೀಲ್ ಈ ಬಗ್ಗೆ ಹೇಳಿದ್ದಾರಲ್ಲ ಅನ್ನೋ ಪ್ರಶ್ನೆಗೆ ಉತ್ತರಿಸಿದ ಸಿ.ಎಂ. ” ನಳಿನ್ ಕುಮಾರ್ ಗೆ ಬುದ್ಧಿಯಿಲ್ಲ. ಸಂಸ್ಕಾರ ಇಲ್ಲ. ಏನ್ ಮಾತಾಡ್ತಾರೆ ಅಂತ ಅವರಿಗೇ ಗೊತ್ತಿರಲ್ಲ. ಅವರ ಬಗ್ಗೆ ಯಾಕಪ್ಪಾ ಮಾತನಾಡುತ್ತೀರಿ ” ಅಂತಾ ಮರು ಪ್ರಶ್ನೆ ಮಾಡಿದ್ರು.
ಬಿಜೆಪಿ – ಆರ್ ಎಸ್ಎಸ್ ನ ಸಾಕಷ್ಟು ಮಂದಿ ನನ್ನ ಸಂಪರ್ಕದಲ್ಲಿದ್ದಾರೆ. ಅದನ್ನೆಲ್ಲ ಹೇಳೋಕಾಗುತ್ತಾ ಅಂತಾ ವ್ಯಂಗ್ಯವಾಡಿದ್ರು.
https://youtu.be/2W1ObdtSYys