ನಟಿ ಅಮೂಲ್ಯ ಸಿನಿಮಾಗಳಲ್ಲಿ ಎಷ್ಟು ಅಮಾಯಕವಾಗಿ ಕಾಣುತ್ತಾರೋ ನಿಜ ಜೀವನದಲ್ಲೂ ಅಷ್ಟೇ ಮೃದು ಸ್ವಭಾವದ ನಟಿ. ಅವರು ಪಕ್ಷಿಗಳ ರಕ್ಷಣೆಗೆ ಗೋಲ್ಡನ್ ಕ್ವೀನ್ ಅಮೂಲ್ಯ ಕರೆ ನೀಡಿದ್ದಾರೆ.
ವಿವಾಹದ ನಂತರ ಸಿನಿಮಾ ರಂಗದಿಂದ ಕೊಂಚ ಬ್ರೇಕ್ ಪಡೆದಿರುವ ನಟಿ ಸ್ಯಾಂಡಲ್ವುಡ್ಗೆ ಕಮ್ಬ್ಯಾಕ್ ಮಾಡಲಿದ್ದಾರಂತೆ.
ಈ ಸುದ್ದಿ ತುಂಬಾ ದಿನಗಳಿಂದ ಗಾಂಧಿನಗರಗಳಲ್ಲಿ ಹರಿದಾಡುತ್ತಿದೆ. ಆದರೂ ಅಮೂಲ್ಯ ಗಂಡ ಜಗದೀಶ್ ಜತೆ ಫಾರಿನ್ ಟ್ರಿಪ್ ಅಂತ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ.
ಇಷ್ಟೆಲ್ಲ ಓಡಾಡುತ್ತಿದ್ದರೂ ಅವರಿಗೆ ಹಕ್ಕಿಯಾಗುವ ಆಸೆ ಇದೆಯಂತೆ. ಎಲ್ಲೆಂದರೆಲ್ಲಿ ಬೇಕಾದಾಗ ಹಾರಿ ಹೋಗಬಹುದು ಅನ್ನೋ ಕಾರಣಕ್ಕೆ ತಾನೂ ಹಕ್ಕಿಯಾಗಬಾರದಿತ್ತೆ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.