Friday, November 15, 2024
ಸುದ್ದಿ

ಸ್ಪರ್ಧೆಗಳಿಂದ ಪ್ರಾಯೋಗಿಕ ಜೀವನಾನುಭವ ಪ್ರಾಪ್ತಿ: ಶ್ರೀನಿವಾಸ ಪೈ – ಕಹಳೆ ನ್ಯೂಸ್

ಪುತ್ತೂರು: ಸ್ಪರ್ಧೆಗಳೆಂದರೆ ಕೇವಲ ಸಂಭ್ರಮವಷ್ಟೇ ಅಲ್ಲ. ಅದೊಂದು ಪ್ರಾಯೋಗಿಕ ನೆಲೆಯಿಂದ ಜೀವನಾನುಭವ ಪಡೆಯುವ ವೇದಿಕೆ. ವಿದ್ಯಾಭ್ಯಾಸದ ನಚಿತರದ ಜೀವನಕ್ಕೆ ಸ್ಪರ್ಧೆಗಳು ತಳಹದಿಯನ್ನು ಒದಗಿಸುತ್ತವೆ. ಸಮಾಜದಲ್ಲಿ ನಡೆದುಕೊಳ್ಳಬೇಕಾದ ರೀತಿ, ವಹಿಸಿಕೊಳ್ಳಬೇಕಾದ ಜವಾಬ್ಧರಿಗಳ ಕುರಿತು ಅನುಭವ ನೀಡುತ್ತದೆ ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಹೇಳಿದರು.

ಅವರು ಕಾಲೇಜಿನ ಮಾನವಿಕ ಸಂಘದ ಆಶ್ರಯದಲ್ಲಿ ಅಂತಿಮ ವರ್ಷದ ಕಲಾ ವಿದ್ಯಾರ್ಥಿಗಳು ಪ್ರಥಮ ಹಾಗೂ ದ್ವಿತೀಯ ವರ್ಷದ ಕಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಕಲಾ ಸ್ಪರ್ಧೆ ಪನೋರಮಾ 2019 ಅನ್ನು ಉದ್ಘಾಟಿಸಿ ಮಂಗಳವಾರ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಪರ್ಧೆಗಳು ನಮ್ಮೊಳಗಿನ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ರಹದಾರಿಯೆನಿಸುತ್ತವೆ. ಕೇವಲ ಭಾಗವಹಿಸುವವರಿಗಷ್ಟೇ ಅಲ್ಲದೆ, ಪ್ರೇಕ್ಷಕರಿಗೂ ವಿನೂತನ ಅನುಭವ ದೊರಕುತ್ತದೆ. ವೈಯಕ್ತಿಗ, ಸಾಂಘಿಕ ನ್ಯೂನತೆ ಮೀರಿ ಬೆಳೆಯಲು ಇದರಿಂದ ಸಾಧ್ಯವೆನಿಸುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ತನಗೆ ದೊರೆತ ಅವಕಾಶವನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು. ಮಾತ್ರವಲ್ಲದೆ ಮತ್ತೊಬ್ಬರಿಗೆ ಪ್ರೇರಣೆ ನೀಡಬೇಕು ಎಂದು ಕರೆನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಲೇಜಿನ ಐಕ್ಯುಎಸಿ ಸಂಯೋಜಕ ಡಾ.ಶ್ರೀಧರ ಎಚ್.ಜಿ ಮಾತನಾಡಿ ಕೃತಿಯೊಂದು ಹೇಗೆ ಬದುಕಬೇಕೆಂದು ಮಾರ್ಗದರ್ಶನ ಮಾಡಬಹುದು. ಆದರೆ ಯಶಸ್ಸು ನಮ್ಮೊಳಗಿನ ಅಂತಃಸತ್ವವನ್ನು ಅವಲಂಭಿಸಿದೆ. ನಮ್ಮ ಸಾಮರ್ಥ್ಯದ ಅನಾವರಣಕ್ಕೆ ನಾವು ಯತ್ನಿಸಬೇಕು ಎಚಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ವಿವೇಕಾನಂದ ಕಾಲೇಜಿನಲ್ಲಿ ಪ್ರತಿವರ್ಷ ಬೇರೆ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ನಾನಾ ಸ್ಪರ್ಧೆಗಳು ಆಯೋಜನೆಗೊಳ್ಳುತ್ತವೆ. ಆದರೆ ನಮ್ಮ ವಿದ್ಯಾರ್ಥಿಗಳ ಸಾಮರ್ಥ್ಯದ ಅನಾವರಣಕ್ಕಾಗಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗಗಳಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ಸ್ಪರ್ಧೆಗಳ ಆಯೋಜನೆಗಳಾಗುತ್ತವೆ. ಜತೆಗೆ ಎಲ್ಲರಿಗೂ ಅವಕಾಶ ದೊರೆಯುತ್ತದೆ ಎಚಿದರು.

ಮಾನವಿಕ ಮುಖ ಹಾಗೂ ಸಾಮಾಜಿಕ ಚಿಂತನೆ ಹಾಗೂ ವೈಯಕ್ತಿಕ ಬೆಳವಣಿಗೆ ಅತ್ಯಂತ ಅಗತ್ಯ. ಅನೇಕರಲ್ಲಿ ಕೀಳರಿಮೆ ಇರುತ್ತದೆ. ಆದರೆ ನಮ್ಮ ಅವಕಾಶಗಳನ್ನು ಅರಿತುಕೊಂಡಾಗ ಹೊಸ ಶಕ್ತಿ ನಮ್ಮೊಳಗೆ ಮೂಡಲು ಸಾಧ್ಯ. ಯಾವ ಸಾಧನೆಯೂ ವ್ಯಕ್ತಿಯ ಮೆದುಳಿನ ಗಾತ್ರದಿಂದ ಸಾಧ್ಯವಾಗುವುದಿಲ್ಲ ಬದಲಿಗೆ ಯೋಚಿಸುವ ಸಾಮರ್ಥ್ಯದ ಮೇಲೆ ಯಶಸ್ಸು ಕೈಗೆಟಕುತ್ತದೆ ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿನಿ ಅಶ್ವಿನಿ ಪ್ರಾರ್ಥಿಸಿದರು. ಮಾನವಿಕ ಸಂಘದ ಸಂಚಾಲಕಿ ಡಾ.ಮಲ್ಲಿಕಾ ಪ್ರಸ್ತಾವನೆಗೈದು ಸ್ವಾಗತಿಸಿದರು. ಇಂಗ್ಲಿಷ್ ಉಪನ್ಯಾಸಕಿ ಮೋತಿ ಬಾೈ ವಂದಿಸಿದರು. ಇಂಗ್ಲಿಷ್ ಉಪನ್ಯಾಸಕಿ ಅಂಬಿಕಾ ಕಾರ್ಯಕ್ರಮ ನಿರ್ವಹಿಸಿದರು. ಸಭಾಕಾರ್ಯಕ್ರಮದ ನಚಿತರ ವಿವಿಧ ಸ್ಪರ್ಧೆಗಳು ಆಯೋಜನೆಗೊಂಡವು.